ಕೋವಿಡ್ ಮಾರ್ಗಸೂಚಿ ಬದಲಾವಣೆ, ಬಸ್, ಮೆಟ್ರೋ ಸಂಚಾರಕ್ಕೆ ಅವಕಾಶ?: ಇಂದು ಸಂಜೆ ಸಿಎಂ ಮಹತ್ವದ ಸಭೆ

ಬೆಂಗಳೂರು, ಜೂನ್ 19, 2021 (www.justkannada.in): ಜೂನ್.21ರ ನಂತರ ಮಾರ್ಗಸೂಚಿ ಪರಿಷ್ಕರಿಸುನ ಕುರಿತಂತೆ ಸಿಎಂ ಯಡಿಯೂರಪ್ಪ ಇಂದು ಮಹತ್ವದ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ.

ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಚಿವರು, ತಜ್ಞರ ಸಭೆ ನಡೆಸಲಿದ್ದಾರೆ. ಸೋಮವಾರದಿಂದ ಅನ್ ಲಾಕ್ 2.0 ಮಾರ್ಗಸೂಚಿ ಪರಿಷ್ಕರಣೆ ಕುರಿತಂತೆ ಚರ್ಚೆ ನಡೆಸಲಿದ್ದಾರೆ.

ಅನ್ ಲಾಕ್ 2.0 ಕುರಿತಂತೆ ಚರ್ಚೆ ನಡೆಸಲಿರುವ ಅವರು, KSRTC, ಬಿಎಂಟಿಸಿ ಹಾಗೂ ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಕಾರ್ಖಾನೆಗಳು, ಕೆಲಸ ಕಂಪನಿಗಳಿಗೆ ರಾಜ್ಯ ಸರ್ಕಾರ ಅನ್ ಲಾಕ್ ಮಾರ್ಗಸೂಚಿಯಲ್ಲಿ ತೆರೆಯೋದಕ್ಕೆ ಅವಕಾಶ ನೀಡಿದೆ.