ವಿಶ್ವನಾಥ್ ಅವ್ರೇ ಗಾಳಿಯಲ್ಲಿ ಗುಂಡು ಬೇಡ, ಇದ್ರಿಂದ ನಿಮ್ಗೇ ಡ್ಯಾಮೇಜ್ ಆಗುತ್ತೆ : ಶಾಸಕ ನಾಗೇಂದ್ರ ಕಿಡಿ

 

ಮೈಸೂರು, ಜೂ.19, 2021 : (www.justkannada.in news ) ಬಿಜೆಪಿ ಒಂದು ಶಿಸ್ತಿನ ಪಕ್ಷ. ವಿಶ್ವನಾಥ್ ಪಕ್ಷಕೆ ಹೊಸಬರು. ಪಕ್ಷದ ಸಿದ್ದಾಂತ ಅವರಿಗೆ ಗೊತ್ತಿಲ್ಲ. ಈ ರೀತಿ ಆರೋಪ ಮಾಡುವ ಮೂಲಕ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಬೇಡಿ ವಿಶ್ವನಾಥ್ ಸಾಹೇಬರೆ.

ಮೈಸೂರು ನಗರಪಾಲಿಕೆ ಅನುದಾನ ಹಾಗೂ ಸಂಘ ಸಂಸ್ಥೆಗಳ ನೆರವಿನಿಂದ 1000 ಬಡ ಕುಟುಂಬಕ್ಕೆ ಆಹಾರ ಕಿಟ್ ಸಮಾರಂಭ ನಗರದ ಮಹಾರಾಣಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಎಲ್ ನಾಗೇಂದ್ರ, ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು. ಈ ವೇಳೆ ಬಿಜೆಪಿ ಎಂಎಲ್ಸಿ ಅಡಗೂರು ಎಚ್. ವಿಶ್ವನಾಥ್ ಆರೋಪಕ್ಕೆ ಶಾಸಕ ಎಲ್ ನಾಗೇಂದ್ರ ಈ ರೀತಿ ಅಸಮಧಾನ ವ್ಯಕ್ತಪಡಿಸಿದರು.

jk

ನಿಮ್ಮ ಎಲ್ಲಾ ಆರೋಪಕ್ಕು ಸಂಜೆಯೆ ಉತ್ತರ ಸಿಕ್ಕಿದೆ. ಸರ್ಕಾರಕ್ಕೆ ಸಲಹೆಗಳನ್ನು ನೀವು ಕೊಡಬೇಕು. ಪಕ್ಷ ಇದನ್ನ ಗಮನಿಸುತ್ತಿದೆ‌. ಹೈಕಮಾಂಡ್ ಕೂಡ ಗಮನಿಸುತ್ತಿದೆ. ಸತ್ಯಕ್ಕೆ ದೂರವಾದ ಆರೋಪ ಮಡುವುದು ಎಷ್ಟು ಸರಿ. ನಮ್ಮ‌ ಇತಿ‌ಮಿತಿ ತಿಳಿದು ಮಾತನಾಡಿ. ಇದು ಕೇವಲ ಪಕ್ಷಕ್ಕೆ ಮಾತ್ರ ಡ್ಯಾಮೇಜ್ ಆಗಲ್ಲ. ವಿಶ್ವನಾಥ್ ಅವರಿಗೂ ಡ್ಯಾಮೇಜ್ ಆಗುತ್ತೆ. ಆದ್ದರಿಂದ ಅನಗತ್ಯವಾಗಿ ಮಾತನಾಡಿ ನಗೆಪಾಟಲಿಗೆ ಈಡಾಗಬೇಡಿ.

ವಿಶ್ವನಾಥ್ ಅವರು ಪದೇ ಪದೇ ಮೀಡಿಯಾ ಮುಂದೆ ಹೋಗೊದು ನೋಡಿದರೆ, ಸಚಿವ ಸ್ಥಾನ ಸಿಗಲಿಲ್ಲ ಎಂಬ ಹತಾಶೆಯ ಕಾರಣ ಇರಬಹುದು ಎಂಬ ಸಂಶಯ ಮೂಡುತ್ತದೆ. ಆದ್ದರಿಂದ ಪಕ್ಷದ ಹಾಗೂ ಪಕ್ಷದ ನಾಯಕರ ವಿರುದ್ಧ ಈ ರೀತಿ ಮಾತ‌ನಾಡುವುದು ಸರಿಯಲ್ಲ. ಶಾಸಕ ಎಲ್ ನಾಗೇಂದ್ರ ಹೇಳಿಕೆ.

selecting –mayor- candidate-MLA L. Nagendra.

key words : mysore-corproration-mcc-MLA-BJP-Nagendra-vishwanath-allegation