ರಾತ್ರೋರಾತ್ರಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣ: ಪ್ರತಿಮೆ ವಶಕ್ಕೆ ಪಡೆದಿದ್ದಕ್ಕೆ ಕತ್ತು ಕೊಯ್ದುಕೊಂಡ ಯುವಕ.

ಮೈಸೂರು,ಡಿಸೆಂಬರ್,4,2021(www.justkannada.in): ಅನುಮತಿ ಇಲ್ಲದೆ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡಲು ಮುಂದಾದ ಯುವಕರನ್ನ ತಡೆದು ಪ್ರತಿಮೆ ವಶಕ್ಕೆ ಪಡೆದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಪಡುವಾರಹಳ್ಳಿಯ ಮಾತೃ ಮಂಡಳಿ ವೃತ್ತದಲ್ಲಿ ಈ ಘಟನೆ ನಡೆದಿದೆ. ಯುವಕರು ರಾತ್ರೋರಾತ್ರಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದರು. ಈ ವೇಳೆ ಪೊಲೀಸರು ಯುವಕರನ್ನ ತಡೆದಿದ್ದು ಪ್ರತಿಮೆಯನ್ನ ಪಾಲಿಕೆ ಸಿಬ್ಬಂದಿ ವಶಕ್ಕೆ ಪಡೆದರು.

ಈ ಮಧ್ಯೆ ಪ್ರತಿಮೆ ವಶಕ್ಕೆ ಪಡೆದನ್ನು ಖಂಡಿಸಿ ಪಡುವಾರಹಳ್ಳಿಯ ಸತೀಶ್ (29) ಎಂಬ ಯುವಕ ಕತ್ತು ಕೊಯ್ದುಕೊಂಡ ಘಟನೆ ನಡೆದಿದೆ. ತಕ್ಷಣ ಯುವಕನನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಸ್ಥಳದಲ್ಲಿ ಕೆಲಕಾಲ ಬಿಗುವಿನ‌ ವಾತಾವರಣ ನಿರ್ಮಾಣವಾಗಿತ್ತು.

ಅಂಬೇಡ್ಕರ್ ಪ್ರತಿಮೆ ವಶಕ್ಕೆ ಪಡೆದುದನ್ನ ಖಂಡಿಸಿ ಮಾತೃ ಮಂಡಳಿ ವೃತ್ತದ ಬಳಿ ಬೃಹತ್ ಪ್ರತಿಭಟನೆ ನಡೆಯಿತು. ಪಡುವಾರಹಳ್ಳಿ ನಿವಾಸಿಗಳು ಹಾಗೂ ದಲಿತ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ಮಾತೃ ಮಂಡಳಿ ವೃತ್ತ ಬಂದ್ ಮಾಡಿ ಪ್ರತಿಭಟನೆ ನಡೆಸಿದ  ಪ್ರತಿಭಟನಾಕಾರರು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಶಾಸಕ ಎಲ್.ನಾಗೇಂದ್ರ, ನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತರೆಡ್ಡಿ, ಡಿಸಿಪಿ ಪ್ರದೀಪ್ ಗುಂಟಿ ಭೇಟಿ ನೀಡಿದರು.

ಇದೇ ವೇಳೆ ಪ್ರತಿಭಟನಾಕಾರರನ್ನ ಪೊಲೀಸರು ಸುತ್ತುವರೆದಿದ್ದು ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Key words: Statue – Ambedkar -.mysore-young man – protest-police

ENGLISH SUMMARY…

Ambedkar statue constructed overnight: Youth cuts throat for seizing the statue
Mysuru, December 4, 2021 (www.justkannada.in): A few youths in Mysuru were building a statue of the Architect of the Indian Constitution, Dr. B.R. Ambedkar, without bringing it to the notice of anyone. However, the police intervened and took over the statue.
The incident took place at the Matrumandali Circle in Paduvarahalli, Mysuru. A few youths were trying to erect the statue overnight. The incident came to the notice of the police, who stopped them and took over the statue.
One of the youths named Satish (29), a resident of Paduvarahalli, attempted to commit suicide by cutting his throat as the police seized the statue. However, he was admitted to a private hospital. Due to this, a tense situation was witnessed in the area for some time.
Residents of the area, along with the members of a few Dalit organizations staged a protest at the Maturmandali circle condemning the police for taking over the statue. The protestors shouted slogans against the District Administration and State Government. MLA L. Nagendra, MCC Commissioner Lakshmikanth Reddy, DCP Pradeep Gunti visited the spot.
Keywords: Ambedkar statue/ Matrumandali circle/ Mysuru/ police seize