ಗೋಪಾಲಕೃಷ್ಣ ಹಾಕಿರುವ ಸವಾಲಿಗೆ ನಾನು ಸಿದ್ಧ- ಶಾಸಕ ಎಸ್.ಆರ್ ವಿಶ್ವನಾಥ್.

ಬೆಂಗಳೂರು,ಡಿಸೆಂಬರ್,4,2021(www.justkannada.in):  ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಹಾಕಿರುವ ಸವಾಲಿಗೆ ಸಿದ್ಧ. ತಿರುಮಲದಲ್ಲಿ ಆಣೆಪ್ರಮಾಣ ಮಾಡಲು ಸಿದ್ಧ ಎಂದು ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಹೇಳಿದ್ದಾರೆ.

ಶಾಸಕ ಎಸ್.ಆರ್ ವಿಶ್ವನಾಥ್ ಕೊಲೆಗೆ ಸಂಚು ರೂಪಿಸಿದ ಆರೋಪದ ಮೇಲೆ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಜಡ್ಜ್ ಮುಂದೆ ಶರಣಾಗಿ ಜಾಮೀನು ಪಡೆದಿದ್ದಾರೆ. ಇಂದು ವಿಚಾರಣೆಗೆ ಹಾಜರಾಗಿದ್ದಾರೆ. ಈ ಕೊಲೆ ಸಂಚು ಆರೋಪಕ್ಕೆ ಸಂಬಂದಿಸಿದಂತೆ ತಿರುಪತಿ ತಿಮ್ಮಪನ ಮೇಲೆ ಆಣೆ ಪ್ರಮಾಣ ಮಾಡುವಂತೆ ಶಾಸಕ ಎಸ್.ಆರ್ ವಿಶ್ವನಾಥ್ ಗೆ ಸವಾಲು ಹಾಕಿದ್ದರು.

ಈ ಕುರಿತು ಮಾತನಾಡಿರುವ ಶಾಸಕ ಎಸ್.ಆರ್ ವಿಶ್ವನಾಥ್, ಗೋಪಾಲಕೃಷ್ಣ ಹಾಕಿರುವ ಸವಾಲಿಗೆ ನಾನು ಸಿದ್ಧ. ಆದರೆ ತಿರುಮಲದಲ್ಲಿ ಗೋಪಾಲಕೃಷ್ಣನಿಗೆ ಜಾಗ ಸೇಫ್ ಅಲ್ಲ. ಅಲ್ಲಿ ಏನಾದರೂ ಆದರೆ ನನ್ನ ಮೇಲೆ ಬರುತ್ತದೆ. ವೈಯ್ಯಾಲಿ ಕಾವಲ್ ನ ಟಿಟಿಡಿ ದೇವಸ್ಥಾನದಲ್ಲಿ ಆಣೆ ಪ್ರಮಾಣ ಮಾಡಲು ಸಿದ್ಧ ಎಂದರು.

ಕಡಬಗೆರೆ ಸೀನ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐಗೆ ವಹಿಸಿದರೇ ನನ್ನ ಅಭ್ಯಂತರವಿಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗ ಈ ಘಟನೆ ನಡೆದಿದ್ದು.  ಅವರೇ ಕೇಸ್ ಕ್ಲೋಸ್ ಮಾಡಿದ್ದು ಪ್ರಕಣದಲ್ಲಿ ನನ್ನ ಹೆಸರು ತಂದಿದ್ದಕ್ಕೆ ಬೇಸರವಾಗಿದೆ. ಬೇಕಂತಲೇ ಪ್ರಕರಣದಲ್ಲಿ ನಮ್ಮವರ ಹೆಸರು ಸೇರ್ಪಡೆ ಮಾಡಿದ್ದಾರೆ ಎಂದರು.

Key words: I am- ready – challenge –Gopalakrishna- MLA- SR Vishwanath