Monday, September 28, 2026

BDA Apartments

ಬೀರೇಶ್ವರ ದೇವಾಲಯದ ಬಸವ ವಿಧಿವಶ: ಭಕ್ತರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ BDA JK_Adv BD...
Home Front Page ಬೀರೇಶ್ವರ ದೇವಾಲಯದ ಬಸವ ವಿಧಿವಶ: ಭಕ್ತರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ

ಬೀರೇಶ್ವರ ದೇವಾಲಯದ ಬಸವ ವಿಧಿವಶ: ಭಕ್ತರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ

ಮೈಸೂರು,ಮೇ.12,2026 (www.justkannada.in):  ವಯೋಸಹಜ ಸಮಸ್ಯೆಯಿಂದ ಮೃತಪಟ್ಟ ಮೈಸೂರು ತಾಲೂಕಿನ ವರಕೋಡು ಬೀರೇಶ್ವರಸ್ವಾಮಿ ದೇವಾಲಯದ ಬಸವನ ಅಂತ್ಯಕ್ರಿಯೆ ಶಾಸ್ತ್ರೋಕ್ತವಾಗಿ ಸಾಂಪ್ರದಾಯಿಕ ಪೂಜೆಯೊಂದಿಗೆ ಬೀರೇಶ್ವರಸ್ವಾಮಿ ದೇವಾಲಯ ಬಳಿ ಅಪಾರ ಭಕ್ತರ ಸಮ್ಮುಖದಲ್ಲಿ ನೆರವೇರಿತು.

ವರಕೋಡು ಬೀರೇಶ್ವರ ದೇವಾಲಯದ ಆವರಣದಲ್ಲಿಯೇ ಸೋಮವಾರ ಸಂಜೆ ಕುಸಿದು ಬಿದ್ದು ಅಸುನೀಗಿದ ಬಸವನ ಮೃತದೇಹವನ್ನು ತೆರೆದ ವಾಹನದಲ್ಲಿ ವರಕೋಡು, ಬಡಗಲಹುಂಡಿ, ಕೆಂಪೇಗೌಡನಹುಂಡಿ, ಹೊಸಹುಂಡಿ ಹಾಗೂ ಮೂಡಲಹುಂಡಿ ಗ್ರಾಮದಲ್ಲಿ ಮೆರವಣಿಗೆ ಮೂಲಕ ಸಾಗಿತು.  ಗ್ರಾಮದ ನಿವಾಸಿಗಳು ಪೂಜೆ ಸಲ್ಲಿಸಿ ನೆಚ್ಚಿನ ಬಸವನಿಗೆ ವಿದಾಯ ಹೇಳಿದರು.

ಬಳಿಕ ಮತ್ತೆ ವರಕೋಡು ಗ್ರಾಮದ ಮೂಲಕ ಬೀರೇಶ್ವರಸ್ವಾಮಿ ದೇವಾಲಯಕ್ಕೆ ತಂದು ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ಅರ್ಚಕ ಗಣೇಶ್ ದೀಕ್ಷಿತ್, ಗುರುಮಠದ ಗುರುಸ್ವಾಮಿ ನೇತೃತ್ವದಲ್ಲಿ  ಬಸವನ ಅಂತ್ಯಕ್ರಿಯೆ ನೆರವೇರಿತು. ಅಂತ್ಯಕ್ರಿಯೆಯಲ್ಲಿ ಐದು ಗ್ರಾಮಗಳ ಗ್ರಾಮಸ್ಥರು ಸೇರಿದಂತೆ ವಿವಿಧೆಡೆ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ ಅಂತಿಮ ನಮನ ಸಲ್ಲಿಸಿದರು.ಬೀರೇಶ್ವರ ದೇವಾಲಯದ ಬಸವ ವಿಧಿವಶ jk02_new jk02 new

ಬೀರೇಶ್ವರ ದೇವಾಲಯದ ಕಳಸ ಪ್ರತಿಷ್ಠಾಪನಾ ಜಾತ್ರಾ ಮಹೋತ್ಸವ ಹಾಗೂ 48 ದಿನಗಳ ಮಂಡಲ ಪೂಜಾ ಕೈಂಕರ್ಯದಲ್ಲಿ ಬಸವ ಪಾಲ್ಗೊಂಡು ಎಲ್ಲರ ಗಮನ ಸೆಳೆದಿತ್ತು.

Key words: Beereshwar temple, Basava,  passes away, funaral