ಹಿರಿಯ ನಟ ಶಿವರಾಂ ಆರೋಗ್ಯ ಮತ್ತಷ್ಟು ಗಂಭೀರ.

ಬೆಂಗಳೂರು,ಡಿಸೆಂಬರ್4,2021(www.justkannada.in):  ಅಯ್ಯಪ್ಪ ಸ್ವಾಮಿ ಪೂಜೆ ಮಾಡುತ್ತಿದ್ದ ವೇಳೆ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ  ಹಿರಿಯ ನಟ ಶಿವರಾಂ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ.

ಬೆಂಗಳೂರಿನ ಸೀತಾ ಸರ್ಕಲ್  ಬಳಿಯ ಪ್ರಶಾಂತ್ ಆಸ್ಪತ್ರೆಯಲ್ಲಿ ಹಿರಿಯ ನಟ ಶಿವರಾಂ ಅವರಿಗೆ  ಚಿಕಿತ್ಸೆ ಮುಂದುವರಿಸಲಾಗಿದ್ದು, ಕ್ಷಣ ಕ್ಷಣಕ್ಕೂ ಅವರ ಆರೋಗ್ಯ ಕ್ಷೀಣಿಸುತ್ತಿದೆ ಎನ್ನಲಾಗುತ್ತಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ವೈದ್ಯರು ಈ ಬಗ್ಗೆ ಮಾಹಿತಿ ನೀಡಲಿದ್ದಾರೆ.

ತಲೆಗೆ ಪೆಟ್ಟಾಗಿ ಮಿದುಳಿಗೆ ಡ್ಯಾಮೇಜ್ ಆಗಿದ್ದು, ಶಿವರಾಂ ಅವರು ಕೋಮಾ ಸ್ಥಿತಿಯಲ್ಲಿದ್ದಾರೆ. ಶಿವರಾಂ ಕೋಮಾಸ್ಥಿತಿ ತಲುಪಿರುವುದರಿಂದ ಕುಟುಂಬದವರು, ಅಭಿಮಾನಿಗಳ ವಲಯದಲ್ಲಿ ಆತಂಕ ಮೂಡಿದೆ.

Key words: Senior actor- Shivaram- health – more serious.