ಎಲ್ಲಾ ಕಡೆ ಬಿಜೆಪಿ ವಾತಾವರಣ: ಕನಿಷ್ಠ 15 ಪರಿಷತ್ ಸ್ಥಾನಗಳನ್ನ ಗೆಲ್ತೇವೆ ಎಂದ ಮಾಜಿ ಸಿಎಂ ಬಿಎಸ್ ವೈ.

ಶಿವಮೊಗ್ಗ,ನವೆಂಬರ್,24,2021(www.justkannada.in):  ಡಿಸೆಂಬರ್ 10 ರಂದು ನಡೆಯಲಿರುವ ರಾಜ್ಯ ವಿಧಾನಪರಿಷತ್ ಚುನಾವಣಾ ಕಣ ರಂಗೇರಿದ್ದು, ಮೂರು ಪಕ್ಷದ ರಾಜಕೀಯ ನಾಯಕರು ತಮ್ಮ ತಮ್ಮ ಅಭ್ಯರ್ಥಿಗಳ ಪರ ಪ್ರಚಾರಕ್ಕಿಳಿಯಲಿದ್ದಾರೆ. ಇದೀಗ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸಹ ತಮ್ಮ ಅಭ್ಯರ್ಥಿಗಳ ಪ್ರಚಾರಕ್ಕಿಳಿಯಲಿದ್ದಾರೆ.

ಈ ಕುರಿತು ಮಾತನಾಡಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಶಿವಮೊಗ್ಗ, ದಾವಣಗೆರೆ ಜಿಲ್ಲಾ ಪ್ರವಾಸ ಕೈಗೊಳ್ಳುತ್ತೇನೆ.  ತಾಲ್ಲೂಕು ಕೇಂದ್ರಗಳಲ್ಲಿ ನಮ್ಮ ಅಭ್ಯರ್ಥಿಪರ ಪ್ರಚಾರದಲ್ಲಿ ತೊಡಗುತ್ತೇನೆ. ನಾವು 20 ಅಭ್ಯರ್ಥಿಗಳನ್ನ ಹಾಕಿದ್ದೇವೆ. ಎಲ್ಲಾ ಕಡೆ ಬಿಜೆಪಿ ಪರ ವಾತಾವರಣವಿದ್ದು ಕನಿಷ್ಟ ಪಕ್ಷ 15 ಪರಿಷತ್ ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿನ್ನೆ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿತ್ತು. ಇಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದೆ. ಡಿಸೆಂಬರ್ 10 ರಂದು ಮತದಾನ ನಡೆದು ಡಿಸೆಂಬರ್ 14 ರಂದು ಫಲಿತಾಂಶ ಹೊರಬೀಳಲಿದೆ.

Key words: BJP – 15 legislative council –seats- Former CM -BS yeddyurappa

ENGLISH SUMMARY…

MLC elections: Former CM BSY says there is a wave in favour of BJP
Shivamogga, November 24, 2021 (www.justkannada.in): The activities have taken momentum for the Legislative Council elections that will be held on December 10. The leaders of all the three major national parties have started campaigning on behalf of their candidates. The former CM B.S. Yediyurappa is also not left behind. Speaking at Shivamogga today, B.S. Yediyurappa informed that he would tour the Davangere District soon. “I will campaign in all the taluks on behalf of the BJP candidate. There are 20 candidates from our party. The atmosphere is in favor of the BJP in all places. I am confident of winning at least 15 seats,” he added.
Yesterday was the last date to submit the nomination. The process of verification of nominations will be completed today. The voting will be held on December 10, and the results will be announced on December 14.
Keywords: MLC elections/ BJP/ Former CM B.S. Yedyurappa