ನಾಳೆಯಿಂದ ಭಾರತ ಮತ್ತು ನ್ಯೂಜಿಲೆಂಡ್ ಟೆಸ್ಟ್ ಸರಣಿ ಆರಂಭ

ಬೆಂಗಳೂರು, ನವೆಂಬರ್ 24, 2021 (www.justkannada.in): ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಟೆಸ್ಟ್ ಸರಣಿ ನಾಳೆಯಿಂದ ಆರಂಭವಾಗಲಿದೆ.

ನವೆಂಬರ್ 25 ಗುರುವಾರದಿಂದ ಮೊದಲ ಟೆಸ್ಟ್ ಪಂದ್ಯ ಕಾನ್ಪುರದಲ್ಲಿ ನಡೆಯಲಿದ್ದು, ಎರಡನೇ ಪಂದ್ಯ ಮುಂಬೈನಲ್ಲಿ ನಡೆಯಲಿದೆ. ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಇದುವರೆಗೆ ಟೆಸ್ಟ್ ಸರಣಿ ಸೋತಿಲ್ಲ ಎಂಬ ಆತ್ಮವಿಶ್ವಾಸದ ನಡುವೆ ಟೀಂ ಇಂಡಿಯಾ ತಮ್ಮ ಆಟ ಆರಂಭಿಸಲಿದೆ.

ಕೇನ್ ವಿಲಿಯಮ್ಸನ್ ನಾಯಕತ್ವದ ತಂಡ ಈ ಇತಿಹಾಸವನ್ನು ಬದಲಾಯಿಸುವ ಉತ್ಸಾಹದಲ್ಲಿದೆ. ನ್ಯೂಜಿಲೆಂಡ್ ಭಾರತದ ಹಲವು ಆಕಾಂಕ್ಷೆಗಳನ್ನು ನುಚ್ಚುನೂರು ಮಾಡಿದ ತಂಡವಾಗಿದೆ. ಅದೂ ಐಸಿಸಿ ಟೂರ್ನಿಗಳಲ್ಲಿ. ಐಸಿಸಿ ಟೂರ್ನಿಗಳಲ್ಲಿ ಈ ತಂಡ ಭಾರತಕ್ಕೆ ದೊಡ್ಡ ತಲೆನೋವಾಗಿದೆ.

ಕಳೆದ ಮೂರು ಟೂರ್ನಿಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಜಯ ಸಾಧಿಸಲು ಸಾಧ್ಯವಾಗಿರಲಿಲ್ಲ. 2019 ರಲ್ಲಿ ನಡೆದ ODI ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ಭಾರತವನ್ನು ಸೋಲಿಸಿತ್ತು. ಇದರ ನಂತರ, ಈ ವರ್ಷದ ಜೂನ್‌ನಲ್ಲಿ ನಡೆದ ICC ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ನ್ಯೂಜಿಲೆಂಡ್ ಭಾರತವನ್ನು ಸೋಲಿಸಿತ್ತು.