ನಟ ನಿಖಿಲ್ ಕುಮಾರಸ್ವಾಮಿ ‘ರೈಡರ್’ ಡಿ.24ಕ್ಕೆ ರಿಲೀಸ್

ಬೆಂಗಳೂರು, ನವೆಂಬರ್ 24, 2021 (www.justkannada.in): ನಟ ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಚಿತ್ರ ಡಿ.24ಕ್ಕೆ ಬಿಡುಗಡೆಯಾಗಲಿದೆ.

ಚಿತ್ರದಲ್ಲಿ ನಿಖಿಲ್‌ ಅವರದ್ದು ಬ್ಯಾಸ್ಕೆಟ್‌ಬಾಲ್‌ ಆಟಗಾರನ ಪಾತ್ರ. ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತ ಸಂಯೋಜಿಸಿದ್ದಾರೆ.

ಲಹರಿ ಪ್ರೊಡಕ್ಷನ್ಸ್‌ ಹಾಗೂ ಶಿವನಂದಿ ಎಂಟ್ರೈನ್‌ಮೆಂಟ್ಸ್ ಚಿತ್ರ ನಿರ್ಮಾಣ ಮಾಡಿದೆ. ಸ್ಪೋರ್ಟ್ಸ್‌ ಆಯಕ್ಷನ್‌ ಡ್ರಾಮಾ ಕಥಾಹಂದರವನ್ನು ಚಿತ್ರವು ಹೊಂದಿದ್ದು, ತೆಲುಗಿನ ವಿಜಯ್‌ ಕುಮಾರ್‌ ಕೊಂಡ ನಿರ್ದೇಶನ ಜವಾಬ್ದಾರಿ ನಿರ್ವಹಿಸಿದ್ದಾರೆ.

ತೆಲುಗಿನ ‘ಒಕ್ಕಾ ಲೈಲಾ ಕೋಸಂ’ ಮತ್ತು ‘ಗುಂಡೆ ಜಾರಿ ಗಲ್ಲನ್‌ಥೈಯಿಂದೆ’ ಸಿನಿಮಾಗಳನ್ನು ನಿರ್ದೇಶಿಸಿದ್ದ ವಿಜಯ್‌ ಇದೀಗ ಕನ್ನಡ ಚಿತ್ರ ನಿರ್ಮಾಣ ಮಾಡಿದ್ದಾರೆ.