Wednesday, August 12, 2026

BDA Apartments

Home Cinema ಸ್ಯಾಂಡಲ್ ವುಡ್ ಗೆ ಅಗ್ನಿ ಶ್ರೀಧರ್ ಕಮ್ ಬ್ಯಾಕ್….

ಸ್ಯಾಂಡಲ್ ವುಡ್ ಗೆ ಅಗ್ನಿ ಶ್ರೀಧರ್ ಕಮ್ ಬ್ಯಾಕ್….

 

ಬೆಂಗಳೂರು,ಫೆ,18(www.justkannada.in): ‘ಕಿರಗೂರಿನ ಗಯ್ಯಾಳಿಗಳು’ ಚಿತ್ರದ ನಂತರ ಸಾಹಿತ್ಯದ ಕೃಷಿಯಲ್ಲಿ ಮಗ್ನರಾಗಿದ್ದ ಅಗ್ನಿ ಶ್ರೀಧರ್ ಇದೀಗ ಸ್ಯಾಂಡಲ್ ವುಡ್ ಗೆ ಕಮ್ ಬ್ಯಾಕ್ ಮಾಡಿದ್ದಾರೆ.

ಮನರಂಜನೆಯ ಜತೆಗೆ ಭೂಗತ ಜಗತ್ತನ್ನಾಳಿದ ಜೈರಾಜ್ ಕಥೆಯನ್ನು ಚಿತ್ರದ ಮೇಲೆ ತರಲು ಮುಂದಾಗಿದ್ದಾರೆ. ಅಶುಬೆದ್ರ ನಿರ್ಮಾಣದ ನೂತನ ಚಿತ್ರ ಇದಾಗಿದ್ದು, 70ರ ದಶಕದ ಕೊಳಕಿನ ಜತೆಗೆ ಪ್ರಸ್ತುತ ರಾಜಕಾರಣದ ಹುಳುಕನ್ನೂ ಸೇರಿಸಿ ಜೈರಾಜ್ ಭೂಗತ ಜಗತ್ತಿಗೆ ಬರಲು ಕಾರಣವೇನು ಎಂಬ ವಿಷಯದ ಮೇಲೆ ಬೆಳಕು ಚೆಲ್ಲಲು ಅಗ್ನಿ ಶ್ರೀಧರ್ ಸ್ಕ್ರಿಪ್ಟ್ ರೆಡಿ ಮಾಡಿದ್ದಾರಂತೆ.

ಜೈರಾಜ್ ಭೂಗತ ಜಗತ್ತಿಗೆ ಕಾಲಿಡುವ ಮುನ್ನ ಹೇಗಿದ್ದ ಎಂಬ ಕಥಾಹಂದರವನ್ನು ಚಿತ್ರ ಹೊಂದಿದ್ದು, ಯುವ ಜೈರಾಜ್ ಪಾತ್ರಕ್ಕೆ ಡಾಲಿ ಧನಂಜಯ್ ಜೀವ ತುಂಬಲಿದ್ದಾರೆ.