Monday, August 17, 2026

BDA Apartments

Home Crime  ಕುಡಿದು ಬಂದು ಜಗಳವಾಡುತ್ತಿದ್ದ ಪತಿಯನ್ನ ಹತ್ಯೆಗೈದ ಪತ್ನಿ.

 ಕುಡಿದು ಬಂದು ಜಗಳವಾಡುತ್ತಿದ್ದ ಪತಿಯನ್ನ ಹತ್ಯೆಗೈದ ಪತ್ನಿ.

ಮೈಸೂರು,ಜನವರಿ,22,2022(www.justkannada.in): ಕುಡಿದು ಬಂದು ಜಗಳವಾಡುತ್ತಿದ್ದ ಪತಿಯೇ ಪತ್ನಿಯಿಂದ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಎಚ್.ಡಿ.ಕೋಟೆ ಸರಗೂರು ತಾಲ್ಲೂಕಿನಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ. ಬಸವರಾಜಪ್ಪ (42) ಮೃತ ವ್ಯಕ್ತಿ.  ಪತ್ನಿ ನೇತ್ರಾವತಿಯನ್ನ ಪೊಲೀಸರು ಬಂಧಿಸಿದ್ದಾರೆ. ಮದ್ಯವ್ಯಸನಿಯಾಗಿದ್ದ ಪತಿ ಬಸವರಾಜಪ್ಪ ಕುಡಿದುಬಂದು ಆಗಾಗ ಪತ್ನಿಯೊಡನೆ ಜಗಳ ಮಾಡುತ್ತಿದ್ದ.

ಕಳೆದ ರಾತ್ರಿ ಬಸವರಾಜಪ್ಪ ಪತ್ನಿಯೊಡನೆ ಮಾತಿನ ವಾಗ್ದಾಳಿ ನಡೆಸಿ ಹಲ್ಲೆಗೆ ಮುಂದಾಗಿದ್ದಾನೆ. ಪತಿಯಿಂದ ರಕ್ಷಿಸಿಕೊಳ್ಳಲು ಕುತ್ತಿಗೆ ಹಿಡಿದು ನೆಲಕ್ಕೆ ಉರುಳಿಸಿದಾಗ ಉಸಿರು ಕಟ್ಟಿ ಬಸವರಾಜಪ್ಪ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: murder- wife – husband -drunk