Wednesday, August 12, 2026

BDA Apartments

Home Front Page  ಒಬಿಸಿ ಪಟ್ಟಿ ತಯಾರಿಸುವ ಹಕ್ಕು ರಾಜ್ಯಗಳಿಗೆ: ಕೇಂದ್ರ ನಿರ್ಧಾರಕ್ಕೆ ಜೋಗಿಮಂಜು ಸ್ವಾಗತ

 ಒಬಿಸಿ ಪಟ್ಟಿ ತಯಾರಿಸುವ ಹಕ್ಕು ರಾಜ್ಯಗಳಿಗೆ: ಕೇಂದ್ರ ನಿರ್ಧಾರಕ್ಕೆ ಜೋಗಿಮಂಜು ಸ್ವಾಗತ

ಮೈಸೂರು,ಆಗಸ್ಟ್,12,2021(www.justkannada.in): ಕೇಂದ್ರ ಸರ್ಕಾರ  ಒಬಿಸಿ ಪಟ್ಟಿ ತಯಾರಿಸುವ ಹಕ್ಕು ರಾಜ್ಯ ಗಳಿಗೆ ನೀಡುವುದನ್ನು ಲೋಕಸಭೆಯಲ್ಲಿ ಮತ್ತು ರಾಜ್ಯ ಸಭೆಯಲ್ಲಿ ಅಂಗಿಕಾರವಾಗಿರುದಕ್ಕೆ  ಮೈಸೂರು ನಗರ ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾದ ಜೋಗಿಮಂಜು ಸ್ವಾಗತಿಸಿದರು…

ನರೇಂದ್ರ ಮೋದಿಯವರ ಸಚಿವ ಸಂಪುಟದಲ್ಲಿ ಭಾರತದ ಎಲ್ಲಾ ರಾಜ್ಯಗಳಿಗೆ ಒಬಿಸಿ ಜಾತಿಯ ಪಟ್ಟಿಯ ಅಧಿಕಾರವನ್ನು ಸಂವಿಧಾನ (127 ನೇ ತಿದ್ದುಪಡಿ) ಲೋಕಸಭೆ ಹಾಗೂ ರಾಜ್ಯ ಸಭೆಯಲ್ಲಿ ಅಂಗೀಕಾರ ಮಾಡಿರುತ್ತಾರೆ.

ಸಾಮಾಜೀಕ ನ್ಯಾಯ ಮತ್ತು ಸಬಲೀಕರಣದ ಸಚಿವರಾದ ವಿರೇದ್ರ ಕುಮಾರ್ ಮಂಡನೆ ಮಾಡಿದರು ಇದಕ್ಕೆ ಸಚಿವ ಸಂಪುಟ ಹಾಗೂ ಎಲ್ಲಾ ಪಕ್ಷದ ಸದಸ್ಯರು ಒಮ್ಮತ ದಿಂದ ಬೆಂಬಲಿಸಿದರು.

ಇಂತಹ ಕಠಿಣವಾದ ನಿರ್ಧಾರವನ್ನು ಮಂಡನೆಮಾಡಿ  ಅನುಮೋದನೆ ಮಾಡಿದ ಕೇಂದ್ರ ಸರ್ಕಾರವನ್ನು ಸ್ವಾಗತಿಸಲಾಗುವುದು ಎಂದು ಜೋಗಿಮಂಜು ಹೇಳಿದರು.

Key words: OBC list –right-mysore-bjp-Jogimanju- welcomes- central decision