ಫಿಲಿಪೀನ್ಸ್ ನಲ್ಲಿ ನಡೆದ ಝೀರೋ ವೇಸ್ಟ್ ಕುರಿತ ಸಮ್ಮೇಳನದಲ್ಲಿ ನಾಗವಾಲ ಪಿಡಿಒ ಡಾ. ಶೋಭರಾಣಿ ಅವರಿಗೆ ‘ವೇಸ್ಟ್ ವಾರಿಯರ್ ಪ್ರಶಸ್ತಿ’

ಮೈಸೂರು, ಜನವರಿ 29, 2023 (www.justkannada.in): ಫಿಲಿಪೀನ್ಸ್‌ ನ ಮನಿಲಾದಲ್ಲಿನಡೆದ ಇಂಟರ್ ನ್ಯಾಷನಲ್ ಝೀರೋ ವೇಸ್ಟ್ ಸಿಟೀಸ್ ಕಾನ್ಫರೆನ್ಸ್ ನಲ್ಲಿ ಮೈಸೂರು ಜಿಲ್ಲೆ ನಾಗವಾಲದ ಪಿಡಿಒ ಡಾ. ಶೋಭರಾಣಿ ಅವರಿಗೆ ‘ವೇಸ್ಟ್ ವಾರಿಯರ್ ಪ್ರಶಸ್ತಿ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಫಿಲಿಪೀನ್ಸ್‌ ನ ಮನಿಲಾದಲ್ಲಿನಡೆದ ಕಾರ್ಯಾಗಾರದಲ್ಲಿಡಾ. ಶೋಭರಾಣಿ, ಅಸುರಕ್ಷಿತ ಸ್ಯಾನಿಟರಿ ಪ್ಯಾಡ್ ತ್ಯಜಿಸಿ ಮುಟ್ಟಿನ ಕಪ್ ಬಳಸುತ್ತಿರುವ ಗ್ರಾಮದ ಮಹಿಳೆಯರ ಜಾಗೃತಿ ಕುರಿತು ಪ್ರಬಂಧ ಮಂಡಿಸಿದ್ದರು.

ಈ ಕುರಿತು ಪಿಡಿಒ ಡಾ. ಶೋಭರಾಣಿ ಅವರು ಬರೆದುಕೊಂಡಿದ್ದಾರೆ.

ಹೊರಟೆ ಫಿಲಿಪೀನ್ಸ್‌ ಗೆ..‌‌.

ಹೇಗೆ ನಮ್ಮಗ್ರಾಮೀಣ ಹೆಣ್ಣು ಮಕ್ಕಳು ತಮ್ಮ ಋತುಸ್ರಾವದ ದಿನಗಳನ್ನು ಸುರಕ್ಷಿತ ಮತ್ತು ಸಹನೀಯವಾಗಿಸಿಕೊಂಡಿದ್ದಾರೆ ಅಂತ ಹೇಳೋದಿಕ್ಕೆ…

ಹೇಗೆ ನಮ್ಮ ಗ್ರಾಮ ಪಂಚಾಯತಿ ಹೆಣ್ಣು ಮತ್ತು ಮಣ್ಣಿನ ಆರೋಗ್ಯದ ಕಾಳಜಿ ಹೊತ್ತಿದೆ ಅಂತ ಹೇಳೋದಿಕ್ಕೆ..‌

ಹೌದು. ನಮ್ಮ ಗ್ರಾಮ ಪಂಚಾಯತಿಯ 2028 ಮಹಿಳೆಯರು ಅಸುರಕ್ಷಿತ ಸ್ಯಾನಿಟರಿ ಪ್ಯಾಡ್ ಗಳನ್ನು ತ್ಯಜಿಸಿ ಮುಟ್ಟಿನ ಕಪ್ಪುಗಳನ್ನು ಬಳಸುತ್ತಿದ್ದಾರೆ. ಋತುಸ್ರಾವ ಎಂಬ ಸಹಜ ಪ್ರಕ್ರಿಯೆ ಬಗ್ಗೆ ಸಿಗ್ಗಿಲ್ಲದೆ ಮಾತಾನಾಡುತ್ತಾರೆ…ಸ್ವತಃ ತಾವೇ ಹದಿಹರೆಯದ ಹೆಣ್ಣು ಮಕ್ಕಳಿಗೆ ಅರಿವು ಮೂಡಿಸುತ್ತಿದ್ದಾರೆ.

ಇದೆಲ್ಲವನ್ನೂ ಫಿಲಿಪೀನ್ಸ್‌ ನ ಮನಿಲಾದಲ್ಲಿ ನಡೆಯುವ International Zero Waste Cities Conference ನಲ್ಲಿ ಭಾಗವಹಿಸಿ ಈ ಎಲ್ಲಾ ಹೆಣ್ಣು ಮಕ್ಕಳ ಧ್ವನಿಯಾಗಲಿದ್ದೇನೆ…

ಅಂದ ಹಾಗೇ ಪ್ರತೀ ಯಶಸ್ವಿ ಕಥೆಯ ಹಿಂದೆ ಮಹಿಳೆ ಇದ್ದರೆ ಇಲ್ಲಿ ಮೂರು ಜನ ಪುರುಷರಿದ್ದಾರೆ…ಈ ಕ್ಷೇತ್ರದ ಶಾಸಕರಾದ ಜಿ ಟಿ ದೇವೇಗೌಡರು, ಗ್ರಾಮ ಪಂಚಾಯತಿ ಅಧ್ಯಕ್ಷರಾದ ನರೇಂದ್ರ ಹಾಗೂ ಹಸಿರು ದಳ ಸಂಸ್ಥೆಯ ಅನಿಲ್ ‌ಎಲ್ಲರಿಗೂ ಆಭಾರಿ..‌ ಪ್ರತೀ ಹಂತದಲ್ಲೂ ಬೆನ್ನೆಲುಬಾಗಿ ನಿಂತ ಇಲಾಖೆಯ ಮುಖ್ಯಸ್ಥರಾದ ಶ್ರೀಮತಿ ಉಮ ಮಹದೇವನ್ ಮೇಡಂ ರವರಿಗೆ ಧನ್ಯವಾದಗಳು..