ಪ್ರಧಾನಿ ಮೋದಿ ಕೈ ಬಲಪಡಿಸೋಣ-ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ…

ಬೆಂಗಳೂರು, ಆಗಸ್ಟ್, 25, 2020(www.justkannada.in) :  ದೇಶಕ್ಕೆ ಉತ್ತಮ ನಾಯಕತ್ವ ದೊರೆಯುತ್ತಿದ್ದು, ದೇಶ ಮತ್ತಷ್ಟು ಅಭಿವೃದ್ಧಿಯಾಗಬೇಕು. ನರೇಂದ್ರ ಮೋದಿ ಅವರ ಮೇಲೆ ನಂಬಿಕೆಯಿದ್ದು, ಅವರ ಕೈ ಗಟ್ಟಿಮಾಡಬೇಕು ಎಂದು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

jk-logo-justkannada-logo

ದೆಹಲಿಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸೇರ್ಪಡೆಗೊಂಡ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ  ಅಣ್ಣಾಮಲೈ, ತಮಿಳುನಾಡಿನಲ್ಲಿ ಕುಟುಂಬ ರಾಜಕಾರಣವಿದೆ.  ಬಿಜೆಪಿ  ಸಾಮಾನ್ಯ ಮನುಷ್ಯರಿಗೆ ಆದ್ಯತೆ ನೀಡುತ್ತದೆ. ಮುರುಗನ್ ಅವರೇ ಇದಕ್ಕೆ ಸಾಕ್ಷಿ. ರಾಷ್ಟ್ರೀಯತೆಗೆ ಹೆಚ್ಚು ಒತ್ತು ನೀಡುತ್ತದೆ. ಪಕ್ಷದ ಸಿದ್ಧಾಂತಗಳು ನೂರಕ್ಕೆ ನೂರರಷ್ಟು ನನಗೆ ಹೊಂದಿಕೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ ಎಂದು ಹೇಳಿದರು.

country-should-further-developed-another-opportunity-development-country-Annamalai

ದೇಶವು ಅಭಿವೃದ್ಧಿಯಲ್ಲಿ ಇನ್ನೂ ಮುಂದೆ ಬರಬೇಕಿದೆ. ದೇಶದ ಸೇವೆ ಮಾಡುವುದಕ್ಕೆ ಮತ್ತೊಂದು ಅವಕಾಶವಾಗಿದೆ. ಪಕ್ಷಕ್ಕೆ ಎಲ್ಲರೂ ತಲೆಬಾಗಬೇಕು. ಐಪಿಎಸ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಇತ್ತೀಚೆಗೆ ಈ ಚಿಂತನೆ ಬಂದಿದ್ದು, ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಪಕ್ಷದ ನಿರ್ಧಾರವೇ ಅಂತಿಮವಾಗಿದ್ದು, ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ ಎಂದು ಅಣ್ಣಮಲೈ ಹೇಳಿದ್ದಾರೆ.

Key words:  country-development-another-opportunity-country-BJP-Annamalai