Tuesday, September 22, 2026

BDA Apartments

ಸೆಂಚುರಿ ಸ್ಟಾರ್ ಶಿವಣ್ಣನ ‘ಘೋಸ್ಟ್’ ಸಿನಿಮಾ ಒಟಿಟಿ ಹಕ್ಕು ಖರೀದಿಸಿದ ಝೀ ! BDA ...
Home Cinema ಸೆಂಚುರಿ ಸ್ಟಾರ್ ಶಿವಣ್ಣನ ‘ಘೋಸ್ಟ್’ ಸಿನಿಮಾ ಒಟಿಟಿ ಹಕ್ಕು ಖರೀದಿಸಿದ ಝೀ !

ಸೆಂಚುರಿ ಸ್ಟಾರ್ ಶಿವಣ್ಣನ ‘ಘೋಸ್ಟ್’ ಸಿನಿಮಾ ಒಟಿಟಿ ಹಕ್ಕು ಖರೀದಿಸಿದ ಝೀ !

ಬೆಂಗಳೂರು, ಅಕ್ಟೋಬರ್ 06, 2023 (www.justkannada.in): ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ ‘ಘೋಸ್ಟ್’ ಸಿನಿಮಾ ಅಕ್ಟೋಬರ್ 19ಕ್ಕೆ ತೆರೆಗೆ ಬರ್ತಿದೆ. ಇದರ ಜತೆಗೆ ಒಟಿಟಿ ಹಕ್ಕುಗಳನ್ನು ಮಾರಾಟ ಮಾಡಲಾಗಿದೆ.

‘ಘೋಸ್ಟ್’ ಸಿನಿಮಾ ಇದೀಗ ಸೆನ್ಸಾರ್ ಮುಗಿಸಿದೆ. ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಜೀ ಸಂಸ್ಥೆ ಚಿತ್ರದ ಡಿಜಿಟಲ್ ರೈಟ್ಸ್ ಖರೀದಿಸಿದೆ. ರಿಲೀಸ್ ಆದ ಒಂದೂವರೆ ತಿಂಗಳ ಬಳಿಕ ಓಟಿಟಿಗೆ ಬರಲಿದೆ.

ಈಗಾಗಲೇ ಸಿನಿಮಾ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಕನ್ನಡಕ್ಕಿಂತ ಹಿಂದಿ ವರ್ಷನ್ ಟ್ರೈಲರ್ ಹೆಚ್ಚು ವೀವ್ಸ್ ಸಾಧಿಸಿದೆ. ಹೀಗಾಗಿ ಏಕಕಾಲದಲ್ಲಿ ಸಿನಿಮಾ ಬಹಳ ದೊಡ್ಡಮಟ್ಟದಲ್ಲಿ ರಿಲೀಸ್ ಆಗುತ್ತಿದೆ.

ನಿರ್ದೇಶಕ ಶ್ರೀನಿ ನಟಿಸಿದ್ದ ‘ಬೀರ್‌ಬಲ್’ ಕತೆಗೂ ‘ಘೋಸ್ಟ್’ಗೂ ಲಿಂಕ್ ಇದೆ ಎನ್ನಲಾಗಿದೆ. ಚಿತ್ರವನ್ನು ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಸಂದೇಶ್ ನಾಗರಾಜ್ ಸಿನಿಮಾ ನಿರ್ಮಿಸಿದ್ದಾರೆ.

ಅನುಪಮ್ ಕೇರ್, ಜಯರಾಂ ಸೇರಿದಂತೆ ಸ್ಟಾರ್ ನಟರು ಚಿತ್ರದಲ್ಲಿ ನಟಿಸಿದ್ದಾರೆ. ಮಹೇಂದ್ರ ಸಿಂಗ್ ಛಾಯಾಗ್ರಹಣ, ಅರ್ಜುನ್ ಜನ್ಯಾ ಸಂಗೀತ ಚಿತ್ರಕ್ಕಿದೆ.