ಕಬಿನಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಮತ್ತೆ ಇಳಿಕೆ.

ಮೈಸೂರು,ಅಕ್ಟೋಬರ್,6,2023(www.justkannada.in): ಕೇರಳದ ವಯನಾಡು ಪ್ರದೇಶದಲ್ಲಿ ಮಳೆ ಕಡಿಮೆಯಾದ ಹಿನ್ನೆಲೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನ ಕಬಿನಿ ಜಲಾಶಯಕ್ಕೆ  ಒಳಹರಿವಿನ ಪ್ರಮಾಣ ಮತ್ತೆ ಕಡಿಮೆಯಾಗಿದೆ.

ಕೇರಳದ ವಯನಾಡು ಪ್ರದೇಶದಲ್ಲಿ ಮಳೆಯಾದ ಹಿನ್ನೆಲೆ ಕಬಿನಿ ಜಲಾಶಯ ಒಳಹರಿವು ಹೆಚ್ಚಳವಾಗಿತ್ತು. ಸದ್ಯ ಒಳಹರಿವು 1972 ಕ್ಯೂಸೆಕ್ ಇದ್ದು, ಒಂದು ಸಾವಿರ ಕ್ಯೂಸೆಕ್  ಹೊರಹೋಗುತ್ತಿದೆ. ಮಳೆ ಕಡಿಮೆಯಾದ ಹಿನ್ನೆಲೆ  ಒಳಹರಿವಿನ ಪ್ರಮಾಣ ಕಡಿಮೆಯಾಗಿದೆ.

ಪ್ರಸ್ತುತ ಕಬಿನಿ ಜಲಾಶಯದ ನೀರಿನಮಟ್ಟ 2276.42  ಅಡಿ ಇದೆ. ಗರಿಷ್ಟ ಮಟ್ಟ  2284 ಅಡಿಯಾಗಿದೆ. ಇನ್ನು ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಕಬಿನಿ. ಕೆಆರ್ ಎಸ್ ಸೇರಿದಂತೆ ಹಲವು ಜಲಾಶಯಗಳು ಭರ್ತಿಯಾಗಿಲ್ಲ. ಈ ನಡುವೆಯೂ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ.

Key words: Inflow – Kabini Reservoir- will- decrease- again.