ಬಿಜೆಪಿಯವರು ನಕಲಿ, ನಾವು ಒರಿಜಿನಲ್ ಹಿಂದೂಗಳು- ಸಚಿವ ರಾಮಲಿಂಗರೆಡ್ಡಿ ವಾಗ್ದಾಳಿ.

ಬೆಂಗಳೂರು,ಅಕ್ಟೋಬರ್,6,2023(www.justkannada.in): ಬಿಜೆಪಿಯವರು ನಕಲಿ, ನಾವು ಒರಿಜಿನಲ್ ಹಿಂದೂಗಳು  ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ಹೆಚ್ಚು ದೇವರ ಭಕ್ತಿ ಹೊಂದಿರುವವರು ಕಾಂಗ್ರೆಸ್ ನವರು . ನಾವು ನಿಜವಾದ ಹಿಂದೂಗಳು. ಬಿಜೆಪಿಯವರು ನಕಲಿ ಹಿಂದೂಗಳು. ದೇವಾಲಯಗಳಿಗೆ ಹೆಚ್ಚಿನ ಸಹಾಯ ಮಾಡಿದ್ದು ಕಾಂಗ್ರೆಸ್. ನನ್ನ ಹೇಳಿಕೆಗೂ ಶಿವಮೊಗ್ಗ ಗಲಾಟೆಗೂ ಸಂಬಂಧವಿಲ್ಲ  ಎಂದರು.

ಚುನಾವಣೆ, ರಾಜಕೀಯಕ್ಕೆ  ಬಿಜೆಪಿ ಹಿಂದುತ್ವ ಬಳಕೆ ಮಾಡಿಕೊಳ್ಳುತ್ತಿದೆ.  ಬಿಜೆಪಿ 4 ವರ್ಷ ಅಧಿಕಾರದಲ್ಲಿತ್ತು. ಆಗ 7 ಸಾವಿರ ರೌಡಿಗಳ ಹೆಸರು ಕೈಬಿಟ್ಟಿದ್ದರು. ರೌಡಿಗಳನ್ನೆಲ್ಲಾ ಬಿಜೆಪಿಗೆ ಸೇರಿಸಿಕೊಂಡಿದ್ದರು . 278 ಕೋಮುಗಲಭೆ ಕೇಸ್ ವಾಪಸ್ ಪಡೆದಿದ್ದಾರೆ.  ಬಿಜೆಪಿ ಕಾಲದಲ್ಲಿ ಪೋಲಿಸ್ ನೈತಿಕಗಿರಿ ಇತ್ತು . ಈಗ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.

Key words: BJP –fake-we -original Hindus – Minister –Ramalingareddy