ಟಿ20ಯಲ್ಲಿ ಗರಿಷ್ಠ ವಿಕೆಟ್: ಯುಜುವೇಂದ್ರ ಚಾಹಲ್ ಸಾಧನೆ

ಬೆಂಗಳೂರು, ಮಾರ್ಚ್ 13, 2021 (www.justkannada.in):

ಭಾರತೀಯ ಬೌಲರ್ ಯುಜುವೇಂದ್ರ  ಚಾಹಲ್ ಟಿ20ಯಲ್ಲಿ ಗರಿಷ್ಠ ವಿಕೆಟ್ ಪಡೆದ ಆಟಗಾರರಾಗಿ ಹೊರಹೊಮ್ಮಿದ್ದಾರೆ.

ಟೀಮ್ ಇಂಡಿಯಾ ಪರವಾಗಿ ಟಿ20 ಮಾದರಿಯಲ್ಲಿ ಜಸ್ಪ್ರೀತ್ ಬೂಮ್ರಾ ಈವರೆಗೆ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿದ್ದರು.

ನಿನ್ನೆ ನಡೆದ ಪಂದ್ಯದಲ್ಲಿ ಚಾಹಲ್ ಜೋಸ್ ಬಟ್ಲರ್ ವಿಕೆಟ್ ಪಡೆದು ಗರಿಷ್ಠ ವಿಕೆಟ್ ಪಡೆದ ಬೌಲರ್ ಎಂಬ ಸಾಧನೆ ಮಾಡಿದ್ದಾರೆ.

ಈ ಮೂಲಕ ಚಹಾಲ್ ಟಿ20 ಕ್ರಿಕೆಟ್‌ನಲ್ಲಿ 60ನೇ ಬಲಿಪಡೆದರು ಟೀಮ್ ಇಂಡಿಯಾ ಸ್ಪಿನ್ನರ್.

100ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಈ ಸಾಧನೆ ಮಾಡಿದ್ದು ವಿಶೇಷ.