ಮಹಿಳಾ ಕ್ರಿಕೆಟ್’ನಲ್ಲಿ ಮಿಥಾಲಿ ರಾಜ್ ಹೊಸ ಮೈಲಿಗಲ್ಲು

ಬೆಂಗಳೂರು, ಮಾರ್ಚ್ 13, 2021 (www.justkannada.in): ಟೀಂ ಇಂಡಿಯಾ ಕ್ಯಾಪ್ಟನ್ ಮಿಥಾಲಿ ರಾಜ್ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ್ದಾರೆ.

ಹೌದು. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಗಡಿ ದಾಟಿದ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಮಿಥಾಲಿ ಪಾತ್ರರಾಗಿದ್ದಾರೆ.

ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲಿ ಸೇರಿ ಅವರು 10 ಸಾವಿರ ರನ್ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಂದಹಾಗೆ ಮಹಿಳಾ ಕ್ರಿಕೆಟಿಗರಿಗೆ ಪುರುಷರಷ್ಟು ಕ್ರಿಕೆಟ್ ಕೂಟಗಳು ದೊರೆಯುವುದಿಲ್ಲ. ಆದರೂ ಈ ಸಾಧನೆ ಮಾಡಿದ್ದಾರೆ.

ಮಿಥಾಲಿ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.