ಮೋದಿ ಸ್ಟೇಡಿಯಂನಲ್ಲಿ ದಾದಾ ‘ಶೂನ್ಯ’ ದಾಖಲೆ ಮುರಿದ ಕಿಂಗ್ ಕೊಯ್ಲಿ!

ಬೆಂಗಳೂರು, ಮಾರ್ಚ್ 13, 2021 (www.justkannada.in): ಅಹಮದಬಾದ್​ನ ನರೇಂದ್ರ ಮೋದಿ ಕ್ರಿಕೆಟ್‌ ಮೈದಾನದಲ್ಲಿ ನಿನ್ನೆ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟಿ 20 ಯಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಶೂನ್ಯ ದಾಖಲೆಯೊಂದನ್ನು ಬರೆದಿದ್ದಾರೆ.

ನಿನ್ನೆ 5 ಎಸೆತಗಳನ್ನು ಎದುರಿಸಿ ಯಾವುದೇ ರನ್​ ಗಳಿಸದೆ ಶೂನ್ಯಕ್ಕೆ ಔಟಾದರು. ಈ ಮೂಲಕ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ದಾಖಲೆಯೊಂದನ್ನು ಮುರಿದರು!

ಟೀಂ ಇಂಡಿಯಾದ ನಾಯಕರಲ್ಲಿ ಅತೀ ಹೆಚ್ಚು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾದ ನಾಯಕನೆಂಬ ‘ಹೆಗ್ಗಳಿಕೆ’ಗೆ ಪಾತ್ರರಾಗಿದ್ದಾರೆ.

ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಲು ಕಾರಣರಾದ ಆರಂಭಿಕ ಬ್ಯಾಟ್ಸ್​ಮನ್​ಗಳ ವೈಫಲ್ಯದಲ್ಲಿ ಕೊಹ್ಲಿಯ ಕೊಡುಗೆಯೂ ಸೇರಿದೆ.