ಯುವ ಪಡೆ ನಮ್ಮ ದೇಶದ ಬೆನ್ನೆಲುಬು: ಯೂತ್ ಕಾಂಗ್ರೆಸ್ ಯುವ ಕಾರ್ಯಕರ್ತರನ್ನ ಹುರಿದುಂಬಿಸಿದ ಡಾ.ನಾಗಲಕ್ಷ್ಮೀ‌ ಚೌಧರಿ…

ಮೈಸೂರು,ಫೆಬ್ರವರಿ,20,2021(www.justkannada.in): ಯುವ ಪಡೆ ನಮ್ಮ ದೇಶದ ಬೆನ್ನೆಲುಬು.  ಅದು ಈ ದೇಶವನ್ನು ಕಟ್ಟಲುಬಹುದು ಬಿಳಿಸಲೂ ಬಹುದು ಎಂದು ಮೈಸೂರಿನ ಯುತ್ ಕಾಂಗ್ರೆಸ್ ಯುವ ಕಾರ್ಯಕರ್ತರನ್ನ ಕೆಪಿಸಿಸಿ ಮಾಧ್ಯಮ ವಕ್ತಾರರಾದ ಡಾ.ನಾಗಲಕ್ಷ್ಮೀ‌ ಚೌಧರಿ ಹುರಿದುಂಬಿಸಿದರು.jk

ನಗರದ ಅಶೋಕ ಪುರಂನಲ್ಲಿರುವ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಮಾಧ್ಯಮ ವಕ್ತಾರರಾದ ಡಾ.ನಾಗಲಕ್ಷ್ಮೀ‌ ಚೌಧರಿ ಮತ್ತು ಯುವ ಕಾಂಗ್ರೆಸ್ ಮುಖಂಡರಾದ ಎಂ ಎನ್ ನವೀನ್ ಕುಮಾರ್ ‌ಅವರ ನೇತೃತ್ವದಲ್ಲಿ ನೂತನವಾಗಿ ಗೆಲುವು ಸಾಧಿಸಿದ ಯೂತ್ ಕಾಂಗ್ರೆಸ್ ನ ಯುವ ಕಾರ್ಯಕರ್ತರನ್ನು ಪ್ರೋತ್ಸಾಹಿಸಿ ಪ್ರಮಾಣ ಪತ್ರ ನೀಡಲಾಯಿತು,

ಇದೆ ಸಂಧರ್ಭದಲ್ಲಿ ಮಾತನಾಡಿದ ಡಾ.ನಾಗಲಕ್ಮೀ ಅವರು, ಅಂಬೇಡ್ಕರ್ ಅವರು ಒಂದು ಸಮಗ್ರ ಚೌಕಟ್ಟಿನ ಅದ್ಭುತ ಸಂವಿಧಾನವನ್ನ‌ ನಮಗೆ ಕೊಟ್ಟಿದ್ದಾರೆ , ನಾವೆಲ್ಲರೂ ಹಲವಾರು ಬಗೆಯ ಸಂಸ್ಕೃತಿ ಸಂಪ್ರದಾಯವನ್ನು ಉಳ್ಳವರಾಗಿದ್ದು ಎಲ್ಲರೂ ಸಮಾನಾಗಿ ಬದುಕಲೂ ಸಂವಿಧಾನವನ್ನು ನೀಡಿದ್ದಾರೆ,

ಯುವ ಪಡೆ ನಮ್ಮ ದೇಶದ ಬೆನ್ನೆಲುಬು.  ಅದು ಈ ದೇಶವನ್ನು ಕಟ್ಟಲುಬಹುದು ಬಿಳಿಸಲು ಬಹುದು , ರಾಜೀವ್ ಗಾಂಧಿಯವರು ಅದನ್ನೆ ಹೇಳಿದ್ದರು ಎಂದು ಅಲ್ಲಿ ನೆರೆದಿದ್ದ ಯುವ ಕಾರ್ಯಕರ್ತರನ್ನು ಡಾ.ನಾಗಲಕ್ಷ್ಮೀ‌ ಚೌಧರಿ ಹುರಿದುಂಬಿಸಿದರು.youth-force-backbone-our-country-dr-nagalakshmi-chowdhury

ಬಳಿಕ ಡಾ.ನಾಗಲಕ್ಷ್ಮೀ‌ ಚೌಧರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು, ಕಾರ್ಯಕ್ರಮದಲ್ಲಿ ನಗರ ಯೂತ್ ಕಾಂಗ್ರೆಸ್ ಅಧ್ಯಕ್ಷ ಹ್ಯಾರಿಸ್ , ರಾಜೇಶ್ ಎಂ , ಶೋಭ ರಾಜೇಶ್, ಪೈ. ವಿಜಯ್ ಕುಮಾರ್ ,ಪುಟ್ಟರಾಜು, ರಾಣಿ ಪ್ರಭ, ಕೆ ಪೈ. ಸುನೀಲ್  ಹರ್ಷ , ಭರತ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Key words:  youth force – backbone – our country-Dr. Nagalakshmi Chowdhury,