ನನ್ನನ್ನು ಟೀಕಿಸದಿದ್ರೆ ಮಾಧ್ಯಮಗಳಿಗೆ ನಿದ್ದೆ ಬಾರದು, ಆದ್ರು ಟೀಕೆಗಳನ್ನು ನಾನು ಸ್ವಾಗತಿಸುತ್ತೇನೆ : ಸಿದ್ದರಾಮಯ್ಯ…

ಮೈಸೂರು, ಫೆ.20, 2021 : (www.justkannada.in news) ಇತ್ತೀಚಿನ ದಿನಗಳಲ್ಲಿ ನನ್ನನ್ನ ಟೀಕೆ ಮಾಡಲಿಲ್ಲ ಅಂದರೆ ಮಾಧ್ಯಮದವರಿಗೆ ನಿದ್ದೆಬರಲ್ಲ. ಆದರೂ ಇದನ್ನ ನಾನು ಸ್ವಾಗತಿಸುತ್ತೇನೆ, ಕಾರಣ ಪತ್ರಿಕಾ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾಜದಲ್ಲಿ ಇರಬೇಕು, ಇಲ್ಲ ಅಂದರೆ ಅದು ಸರ್ವಾಧಿಕಾರಿ ಧೋರಣೆಯಾಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.jk
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಆವರಣದಲ್ಲಿ ಆಯೋಜಿಸಿದ್ದ ಮೈಸೂರು ಜಿಲ್ಲಾ ಪತ್ರಿಕಾ ಛಾಯಾಗ್ರಾಹಕರ ಸಂಘ (MPJA)ದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಆದರೂ ಕೆಲವು ಬಾರಿ ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತೇವೆ, ಇದು ವಿಪರ್ಯಾಸ. ನಾನು ಈಗಲೂ ಟಿವಿಗಿಂತ ಹೆಚ್ಚು ಪತ್ರಿಕೆ ಓದುತ್ತೇನೆ. ಪತ್ರಿಕೆಯಷ್ಟು ಟಿವಿ ಮಾಧ್ಯಮದಲ್ಲಿ ಸುದ್ದಿ ಸತ್ಯತೆ ಇರೋದಿಲ್ಲ. ಪಾಪಾ ಸ್ಥಳೀಯವಾಗಿ ವರದಿಗಾರರು ಸರಿಯಾಗಿಯೇ ವರದಿ ಮಾಡಿದ್ರು, ಅದನ್ನು ಹೆಡ್ ಆಫೀಸ್ ನಲ್ಲಿರುವವರು ತಮ್ಮಿಷ್ಟದಂತೆ ಎಡಿಟ್ ಮಾಡುತ್ತಾರೆ. ಜತೆಗೆ ಓನರ್ ಗಳು ಬೇರೆ ಅದನ್ನು ತಿರುಚಿ ಹಾಕಿಬಿಡ್ತಾರೆ ಎಂದು ಸಿದ್ದರಾಮಯ್ಯ ಮಾರ್ಮಿಕವಾಗಿ ಹೇಳಿದರು.
ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಿಂದ ಸ್ವಲ್ಪ ಮಟ್ಟಿಗೆ ಛಾಯಾಗ್ರಾಹಕರ ವರ್ಚಸ್ಸು ಕಡಿಮೆಯಾಗಿದೆ. ವಾಟ್ಸ್ ಅಪ್, ಫೇಸ್ ಬುಕ್, ಇನ್ ಸ್ಟಗ್ರಾಮ್ ಮುಂತಾದ ಫ್ಲಾಟ್ ಫಾರ್ಮ್ ಗಳ ಮೂಲಕ ಫೋಟೋಗಳು ಅತಿ ವೇಗವಾಗಿ ಜನರನ್ನು ತಲುಪುತ್ತಿರುವುದು ಇದಕ್ಕೆ ಕಾರಣವಿರಬಹುದು. ಅಂದ ಮಾತ್ರಕ್ಕೆ ಸಂಪೂರ್ಣವಾಗಿ ಛಾಯಾಗ್ರಾಹಕರ ವಚ್ಚಸ್ಸು ಕುಂದಿದೆ ಎಂದು ಹೇಳಲಾಗದು ಎಂದರು.mysore-photo-journalist-association-inaguration-siddu-mpja
ಛಾಯಾಗ್ರಾಹಕರಿಗೂ ನಿಮ್ಮದೆ ಆದ ಸಮಸ್ಯೆಗಳಿಗೆ,ಅವುಗಳ ಪರಿಹಾರಕ್ಕೆ ಸಂಘ ಕಟ್ಟಿರೋದು ಸಹಕಾರಿಯಾಗಲಿದೆ. ಛಾಯಾಗ್ರಾಹಕರು ಹಲವು ಅಪಾಯದ ಸನ್ನಿವೇಶಗಳನ್ನ ಎದುರಿಸಿ ಕೆಲಸ ಮಾಡ್ತಾರೆ. ವಿಶೇಷ ಪೋಟೋ ತೆಗೆಯಬೇಕು ಅನ್ನೋದು ನಿಮ್ಮ ಇಚ್ಚೆ. ನಿಮ್ಮದು ಒಂದು ರೀತಿಯ ಸಾಹಸ ಪ್ರವೃತ್ತಿ. ನಿಮ್ಮ ಸಮಸ್ಯೆ, ಪರಿಹಾರ ಎಲ್ಲದಕ್ಕೂ ಈ ಅಸೋಸಿಯೇಷನ್ ಸಹಾಯವಾಗಲಿದೆ ಎಂದು ಸಿದ್ದರಾಮಯ್ಯ ಶುಭಕೋರಿದರು.
ಸಮಾರಂಭದಲ್ಲಿ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶಾಸಕರಾದ ಜಿ.ಟಿ.ದೇವೇಗೌಡ, ಜಮೀರ್ ಅಹಮದ್ ಖಾನ್ , ವಿಧಾನ ಪರಿಷತ್ ಸದಸ್ಯ ಧರ್ಮಸೇನ, ಮೂಡಾ ಅಧ್ಯಕ್ಷ ರಾಜೀವ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್ ಉಪಸ್ಥಿತರಿದ್ದರು.
ಮೈಸೂರು ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ ಅಧ್ಯಕ್ಷ, ಹಿರಿಯ ಛಾಯಾಗ್ರಾಹಕ ಪ್ರಗತಿ ಗೋಪಾಲಕೃಷ್ಣ ಅವರು ಸಂಘದ ಸ್ಥಾಪನೆ, ಧೆಯ್ಯೊದ್ದೇಶದ ಬಗ್ಗೆ ಮಾಹಿತಿ ನೀಡಿದರು. ಸಂಘದ ಖಜಾಂಜಿ ನಾಗೇಶ್ ಪಾಣತ್ತಲೆ ಕಾರ್ಯಕ್ರಮ ನಿರೂಪಿಸಿದರು. ಶ್ರೀರಾಮ್ ಸ್ವಾಗತಿಸಿದರು. ಅನುರಾಗ್ ಬಸವರಾಜು ವಂದಿಸಿದರು.

ENGLISH SUMMARY…

“Media people won’t get sleep if they won’t criticize me, but I welcome them: Siddaramaiah
Mysuru, Feb. 20, 2021 (www.justkannada.in): ” Nowadays the media people won’t get sleep if they won’t criticize me. But I will welcome them, because of the freedom of journalism, freedom of expression our constitution has given us, it should exist in the society, otherwise, it becomes a dictatorship,” opined former CM Siddaramaiah.
He participated in the inaugural function of the Mysuru District Photo Journalists’ Association (MPJA) held in the Mysuru District Journalists’ Association building premises today.mysore-photo-journalist-association-inaguration-siddu-mpja
“Despite this sometimes our acts will be against our constitution and it is very sad. Even today I read newspapers more than watching TV. I believe that there will be more truth in print media news rather than TV media. Though local journos report correctly, it will be edited as per their wish at the Head offices. Moreover, the owners twist the news,” he said sarcastically.
His Holiness Jagadguru Sri Shivarathri Deshikendra Mahaswamiji, MLA G.T. Devegowda, Zamir Ahmed Khan, MLC Dharmasena, MUDA Chairman Rajeev, Mysuru District Journalists’ Association President Ravikumar, and others were present.
Keywords: former CM Siddaramaiah/ Media/ Print media

key words : mysore-photo-journalist-association-inaguration-siddu-MPJA