ಡಾ. ಬಿಆರ್ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮೊದಲ ಕಂತಿನ‌ ಹಣ ಮಂಜೂರು: ಆದೇಶ ಪ್ರತಿ ಹಸ್ತಾಂತರಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ

ಉಡುಪಿ,ಫೆಬ್ರವರಿ,20,2021(www.justkannada.in): ಇಂದು ಉಡುಪಿ ಜಿಲ್ಲಾ ಪ್ರವಾಸದಲ್ಲಿರುವ ಗೃಹ ಸಚಿವ  ಬಸವರಾಜ ಬೊಮ್ಮಾಯಿ  ಅವರು  ಕಾರ್ಕಳದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗಿಯಾದರು.jk

ಗೃಹ ಸಚಿವ ಬಸವರಾಜ ಬೊಮ್ಮಾಯಿ ಶಾಸಕ ಸುನಿಲ್ ಕುಮಾರ್ ಜತೆ ಶಾಸಕರ ಕಚೇರಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ನಂತರ ಕಾರ್ಕಳದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಸಮಾರಂಭದಲ್ಲಿ ಸಚಿವ ಬಸವರಾಜ ಬೊಮ್ಮಾಯಿ ಪಾಲ್ಗೊಂಡರು.BR Ambedkar Bhawan –udupi- karkalla-Home Minister -Basavaraja Bommai

ಡಾ. ಅಂಬೇಡ್ಕರ ಭವನ ನಿರ್ಮಾಣಕ್ಕೆ ಮೊದಲ ಕಂತಿನ‌ ಹಣ ಮಂಜೂರಾಗಿದ್ದು, 75  ಲಕ್ಷ ರೂ. ಮೊತ್ತದ ಮೊದಲ ಕಂತಿನ ಹಣ ಬಿಡುಗಡೆ ಆದೇಶ ಪ್ರತಿಯನ್ನ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಸ್ತಾಂತರಿಸಿದರು.  ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ ) ಕಾರ್ಕಳ ಸಮಿತಿಗೆ ಸರ್ಕಾರದ ಆದೇಶ ಪ್ರತಯನ್ನ ಹಸ್ತಾಂತರಿಸಿದರು. ಈ ವೇಳೆ ಶಾಸಕ ಸುನಿಲ್ ಕುಮಾರ್ ಉಪಸ್ಥಿತರಿದ್ದರು.

Key words: BR Ambedkar Bhawan –udupi- karkalla-Home Minister -Basavaraja Bommai