ಬೆಂಗಳೂರಿನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ.

ಬೆಂಗಳೂರು, ನವೆಂಬರ್,29,2022(www.justkannada.in): ಯುವತಿ ಮೇಲೆ ರ್ಯಾಪಿಡೋ ಬೈಕ್ ಸವಾರ ಮತ್ತು ಆತನ ಸ್ನೇಹಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ನಗರದ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಆರೋಪಿಗಳಾದ ರ್ಯಾಪಿಡೋ ಬೈಕ್ ಸವಾರ ಶಹಾಬುದ್ದಿನ್  ಸ್ನೇಹಿತ ಅಖ್ತರ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ಯುವತಿ ನಿನ್ನೆ ರಾತ್ರಿ ಬಿಎಟಿಎಂ ಲೇಔಟ್ ನಿಂದ ನೀಲಾದ್ರಿ ನಗರಕ್ಕೆ ತೆರಳಲು ರ್ಯಾಪಿಡೋ ಬುಕ್ ಮಾಡಿದ್ದರು.   ಪಿಕಪ್ ವೇಳೆ  ಯುವತಿ ಮದ್ಯ ಸೇವಿಇ ಅರೆಪ್ರಜ್ಞಾವಸ್ಥೆಯಲ್ಲಿದ್ದರು ಎನ್ನಲಾಗಿದೆ.

ಈ ವೇಳೆ ರ್ಯಾಪಿಡೋ ಬೈಕ್ ಸವಾರ ಯುವತಿಯನ್ನ ತನ್ನ ಸ್ನೇಹಿತನ ಜೊತೆ ರೂಮ್ ಗೆ ಕರೆದೊಯ್ದು  ಅತ್ಯಾಚಾರವೆಸಗಿದ್ದಾನೆ.  ಪ್ರಜ್ಞೆ ಬಂದ ಬಳಿಕ ಯುವತಿಗೆ ಬೆದರಿಕೆ ಹಾಕಿ ಬಿಟ್ಟು ಕಳುಹಿಸಿದ್ದರು ಎನ್ನಲಾಗಿದೆ. ಈ ಸಂಬಂಧ ಎಲೆಕ್ಟ್ರಾನ್ ಸಿಟಿ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದು. ದೂರು ಆಧರಿಸಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

Key words: Young woman- gang-raped – Bangalore.