ಸಿದ್ಧರಾಮಯ್ಯಗೆ 75 ವರ್ಷ ವಯಸ್ಸಾಗಿದೆ, ನಿವೃತ್ತಿ ಪಡೆಯಲಿ- ಸಚಿವ ಅಶ್ವಥ್ ನಾರಾಯಣ್ ಟಾಂಗ್

ಬೆಂಗಳೂರು,ನವೆಂಬರ್,29,2022(www.justkannada.in):  ಸೈಲೆಂಟ್ ಸುನೀಲ ಕಾರ್ಯಕ್ರಮಕ್ಕೆ ಬಿಜೆಪಿ ನಾಯಕರು ತೆರಳಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ಧ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಸಚಿವ ಅಶ್ವಥ್ ನಾರಾಯಣ್ ಟಾಂಗ್ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಅಶ್ವಥ್ ನಾರಾಯಣ್,  ಸುನೀಲ್ ಕಾರ್ಯಕ್ರಮಕ್ಕೂ ಬಿಜೆಪಿಗೂ ಸಂಬಂಧವಿಲ್ಲ. ಸೈಲೆಂಟ್ ಸುನೀಲ್ ರಕ್ತದಾನ ಶಿಬಿರ ಮಾಡಿದ್ದರು ನಮ್ಮ ಪಕ್ಷದ ಸಂಸದರಿಬ್ಬರು ಹೋಗಿದ್ದರು.  ಈಗಾಗಲೇ  ಈ ಬಗ್ಗೆ ನಳಿನ್ ಕುಮಾರ್ ಕಟೀಲ್ ಸ್ಪಷ್ಟನೆ ನೀಡಿದ್ದಾರೆ ಎಂದರು.

ಮತಬ್ಯಾಂಕ್ ರಾಜಕಾರಣ ಅಂದರೇ ಸಿದ್ಧರಾಮಯ್ಯ.  ಸಿದ್ಧರಾಮಯ್ಯಗೆ 75 ವರ್ಷ ವಯಸ್ಸಾಗಿದೆ. ನಿವೃತ್ತಿ ಪಡೆಯಲಿ. ಹೊಸಬರಿಗೆ ಅವಕಾಶ ನೀಡಲಿ. ಕಾಂಗ್ರೆಸ್ ನಲ್ಲಿ ನಾಯಕತ್ವ ಇಲ್ಲ. ದಿವಾಳಿಯಾಗಿದೆ. 75  ವರ್ಷವಾದವರು ರಾಜಕಿಯದಿಂದ ನಿವೃತ್ತಿ ಪಡೆಯಲಿ ಎಂದರು.

Key words: Siddaramaiah – 75 years –old- retire-Minister -Aswath Narayan