ರೌಡಿ ಜೊತೆ ಸಂಸದರು ವೇದಿಕೆ ಹಂಚಿಕೊಂಡಿದ್ದು ಸರಿನಾ..?   ಬಿಜೆಪಿ ವಿರುದ್ಧ ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿ.

ಮಂಡ್ಯ,ನವೆಂಬರ್,29,2022(www.justkannada.in): ರೌಡಿಶೀಟರ್ ಆಗಿದ್ದ ಸೈಲೆಂಟ್ ಸುನೀಲನ ಜೊತೆ ಬಿಜೆಪಿ ನಾಯಕರು ವೇದಿಕೆ ಹಂಚಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ  ಬಿಜೆಪಿ ವಿರುದ್ದ ವಿಪಕ್ಷ ನಾಯಕ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.

ಈ ಕುರಿತು ಕೆ.ಆರ್ ಪೇಟೆಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಸೈಲೆಂಟ್ ಸುನೀಲನ ಕಾರ್ಯಕ್ರಮದಲ್ಲಿ  ಇಬ್ಬರು ಸಂಸದರು ಓರ್ವ ಶಾಸಕರು ಭಾಗಿಯಾಗಿದ್ದಾರೆ.  ಸೈಲೆಂಟ್ ಸುನೀಲ ಸರ್ಚ್ ವಾರೆಂಟ್ ನಲ್ಲಿದ್ದಾನೆ . ಏನು ಹೇಳಿದ್ರು ಹಿಂದಿನ ಸರ್ಕಾರದಲ್ಲಿ ಆಗಿಲ್ವಾ ಅಂತಾರೆ. ಅದೊಂದು ರೀತಿ ಬಿಜೆಪಿಗೆ ಅಂಟುರೋಗವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಜನ ನಿಮಗೆ ಅಧಿಕಾರ ಕೊಟ್ಟಿಲ್ಲ.  ನೀವು ಅನೈತಿಕವಾಗಿ ಬಂದಿದ್ದೀರಿ. ನಮ್ಮನ್ನು ಬಿಡಿ ಮೊದಲು ನೀವು ಏನು ಮಾಡಿದ್ದಿರಿ ಹೇಳಿ ರೌಡಿಶೀಟರ್ ಜೊತೆ ಸಂಸದರು ವೇದಿಕೆ ಹಂಚಿಕೊಳ್ಳುವುದು ಸರಿನಾ…? ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.

ಹೆಸರು ನೋಡು ಫೈಟರ್ ರವಿ ಅಂತೆ.  ಆರ್ ಎಸ್ ಎಸ್, ಬಿಜೆಪಿಯವರು ಬರೀ ಇಂತಹದ್ದೆ ಕೆಲಸ ಮಾಡೋದು.  ಸಿಸಿಬಿ ಪೊಲೀಸರು ಸುನೀಲನನ್ನ ಹುಡುಕುತ್ತಿದ್ದಾರೆ. ಆತನನ್ನ ಬಿಜೆಪಿಗೆ  ಸೇರ್ಪಡೆ ಮಾಡಿದ್ರೆ ಅತನನ್ನ ಹಿಡಿಯಲು ಸಾಧ್ಯವೇ..? ಎಂದು ಸಿದ್ಧರಾಮಯ್ಯ ಹರಿಹಾಯ್ದರು.

Key words: rowdy sheeter-Former CM -Siddaramaiah – against -BJP.

ENGLISH SUMMARY..

Is it correct to share the dais with an anti-social element? Former CM Siddaramaiah against BJP
Mandya, November 29, 2022 (www.justkannada.in): Leader of the opposition in the assembly, Siddaramaiah, today criticized the BJP leaders for sharing the dais with rowdy sheeter Silent Sunil, at a program in Bengaluru.
Speaking at K.R. Pet today, Siddaramaiah informed that there were two BJP MPs and one MLA who were present on the dais at a program, with Silent Sunil, against whom a search warrant has been issued. “Whatever accusations we make, they will question hadn’t such an incident had taken place during the earlier government’s period. It has become like an epidemic disease for the BJP people,” he said.
“People have not elected you to power. You are there immorally. Leave us. First, you tell me what have you done. Is it correct for the MPs to share the dais with a rowdy sheeter?,” he questioned
“Look at those names, ‘Fighter Ravi’. The RSS and BJP will do only such works. The CCB police are searching for that guy Sunil. If he is included to BJP, can they arrest him?” Siddaramaiah questioned.
Keywords: Siddaramaiah/ BJP/ Silent Sunil/ MP/ MLA