ಮೈಸೂರು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರಿಗೆ ಯುವ ವಿಜ್ಞಾನಿ ಪ್ರಶಸ್ತಿ.

ಮೈಸೂರು,ಡಿಸೆಂಬರ್,6,2021(www.justkannada.in): ಮೈಸೂರು ವಿಶ್ವವಿದ್ಯಾನಿಲಯದ ಅಣುಜೀವವಿಜ್ಞಾನ ಅಧ್ಯಯನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಮೋಹನ್ ಸಿ.ಡಿ. ಅವರು ಪ್ರೊ.ಎಚ್.ಎಸ್. ಶ್ರೀವಾಸ್ತವ (PHSS) ಫೌಂಡೇಶನ್-ಯಂಗ್ ಸೈಂಟಿಸ್ಟ್ ಪ್ರಶಸ್ತಿಗೆ (2020-21) ಆಯ್ಕೆಯಾಗಿದ್ದಾರೆ.

ಡಾ.ಮೋಹನ್ ಅವರು  ಪ್ರೊ.ಕೆ.ಎಸ್. ರಂಗಪ್ಪ, ವಿಶ್ರಾ೦ತ ಕುಲಪತಿಗಳು, ಮೈಸೂರು ವಿಶ್ವವಿದ್ಯಾನಿಲಯ ಅವರ ಮಾರ್ಗದರ್ಶನದಲ್ಲಿ ಔಷಧೀಯ ಗುಣಲಕ್ಷಣಗಳನ್ನು ಹೊಂದಿರುವ ರಾಸಾಯನಿಕಗಳು ಕಂಡುಹಿಡಿಯುವ ಬಗ್ಗೆ ಸಂಶೋಧನೆ ನಡೆಸುತಿದ್ದಾರೆ. ಡಾ. ಮೋಹನ್ ಅವರು ಇತ್ತೀಚೆಗೆ ನ್ಯಾಷನಲ್ ಅಕಾಡೆಮಿ ಆಫ್ಸೈನ್ಸಸ್, ಇಂಡಿಯಾದಿಂದ NASI-ಪ್ಲಾಟಿನಂ ಜುಬಿಲಿ ಯುವವಿಜ್ಞಾನಿ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ.

ವಿಜ್ಞಾನ, ತಂತ್ರಜ್ಞಾನ, ಆರೋಗ್ಯ, ಪರಿಸರ ಅಥವಾ ಕೃಷಿಯ ಉದಯೋನ್ಮುಖ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವವಿಜ್ಞಾನಿಗಳಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು PHSS ಪ್ರತಿಷ್ಠಾನವು ದ್ವೈವಾರ್ಷಿಕವಾಗಿ ನೀಡಲಾಗುತ್ತದೆ. ಈ ಪ್ರಶಸ್ತಿಯೊಂದಿಗೆ ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನ ರೂ. 15,000/- ಮತ್ತು ಪ್ರತಿಷ್ಠಾನದ ಆಜೀವ ಸದಸ್ಯತ್ವ ನೀಡಲಾಗುವುದು. ನಮ್ಮ ದೇಶದ ಅನೇಕ ಗಣ್ಯವ್ಯಕ್ತಿಗಳು PHSS ಪ್ರತಿಷ್ಠಾನದ ವಿವಿಧ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ ಮತ್ತು ರಾಜ್ಯದ ವಿಶ್ವವಿದ್ಯಾಲಯಗಳ ಯುವ ಅಧ್ಯಾಪಕರು ಇಂತಹ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ, ಇದು ಅನೇಕ ಯುವಕರನ್ನು ವೈಜ್ಞಾನಿಕ ಸಂಶೋಧನೆಗೆ ಪ್ರೇರೇಪಿಸುತ್ತದೆ ಮತ್ತು ಈ ಪ್ರಶಸ್ತಿಯು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪ್ರಾಪ್ತವಾಗಿರುವುದು ಹೆಮ್ಮೆಯ ವಿಷಯವೆಂದು ಕೆ.ಎಸ್ ರಂಗಪ್ಪ ಅವರು ತಿಳಿಸಿದ್ದಾರೆ.

ಈ ವರ್ಷದ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ನೀಡಲಾಗಿದೆ. ಹೆಚ್ಚಿನ ಮಾಹಿತಿಯನ್ನು ಇಲ್ಲಿ ಕಾಣಬಹುದು :https://phssfoundation.org/index.php

Key words: Young- Scientist Award – Assistant Professor-Mohan CD-Mysore University

ENGLISH SUMMARY…

The University of Mysore has set a milestone as its faculty member, Dr. Mohan C. D., is chosen for the Prof. H.S. Srivastava(PHSS)Foundation -YoungScientist (Life Sciences, Environmental Sciences and Agriculture Sciences) for the year 2020-21. Dr. Mohan C. D. works as an Assistant Professor at the Department of Studies in Molecular Biology, University of Mysore, Manasagangotri, Mysore. He works under the supervision of Prof. K. S. Rangappa, former Vice-Chancellor, University of Mysoreon thediscovery of small molecule modulators of cancer cell death. It may be recalled that, Dr. Mohan has recently received NASI-Platinum Jubilee Young Scientist Award from the National Academy of Sciences, India (Government of India recognised oldest Science Academy of India). The National award is given biennially by the PHSS foundation to the young scientists under the age of 40 years in recognition of outstanding contribution in the emerging areas of science, technology, health, environment or agriculture. The Award consists of a citation and cash prize of Rs. 15,000/- and life Membership of the Foundation.

“Many eminent personalities of our country have bagged the different awards of the PHSS Foundation and it is a good development that young faculty from the state universities are winning such national awards which may motivate many youngsters to take up scientific research” Prof. Rangappa says in the press release. The list of awardees of this year has been enclosed with this letter. More information can be found at: https://phssfoundation.org/index.php