ತಾಯಿ ಮತ್ತು ಸಹೋದರಿಯನ್ನು ಕೆರೆಗೆ ತಳ್ಳಿ ಕೊಲೆ ಮಾಡಿದ ಯುವಕ.

ಮೈಸೂರು,ಜನವರಿ,24,2024(www.justkannada.in): ಯುವಕನೊಬ್ಬ ತನ್ನ ತಾಯಿ ಸಹೋದರಿಯನ್ನು ಕೆರೆಗೆ ತಳ್ಳಿ ಕೊಲೆ ಮಾಡಿರುವ ಹೃದಯ ಕಲಕುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ಮರೂರು ಗ್ರಾಮದಲ್ಲಿ ನಡೆದಿದೆ.

ಧನುಶ್ರೀ (19) ಅನಿತಾ (43) ಮೃತಪಟ್ಟ ತಾಯಿ ಮಗಳು. ಮಗ ನಿತಿನ್ ಎಂಬಾತನೇ ಈ ಕೃತ್ಯವೆಸಗಿದ್ದಾನೆ. ಸಹೋದರಿ ಪ್ರೀತಿಗೆ ವಿರೋಧ ವ್ಯಕ್ತಪಡಿಸಿ ನಿತಿನ್‌ ತನ್ನ ತಾಯಿ ಅನಿತಾ ಮತ್ತು ಸಹೋದರಿ ಧನುಶ್ರೀಯನ್ನ ಹತ್ಯೆಗೈದಿದ್ದಾನೆ ಎನ್ನಲಾಗಿದೆ.

ಮೃತದೇಹವನ್ನ ಅಗ್ನಿಶಾಮಕ ಸಿಬ್ಬಂದಿ ಹೊರಗೆ ತೆಗೆದಿದ್ದು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Key words: young man- killed -his mother – sister -mysore