ತುಮಕೂರು,ಜೂನ್,27,2026 (www.justkannada.in): ತನ್ನ ಪ್ರೇಯಸಿಯನ್ನು ಅಪಹರಿಸಿದ ಪಾಗಲ್ ಪ್ರೇಮಿಯೊಬ್ಬ ಆಕೆಗೆ ಚಾಕುವಿನಿಂದ ಇರಿದು ಬಳಿಕ ಕಾರಿನ ಸಮೇತ ನಾಡಬಾಂಬ್ ನಿಂದ ಸ್ಫೋಟಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಾಗೇಂದ್ರ ಮೃತ ಯುವಕ. ನಾಗೇಂದ್ರ ಮತ್ತು ಯುವತಿ 6 ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ಮಧ್ಯೆ ಮದುವೆ ವಿಚಾರವಾಗಿ ಇಬ್ಬರಿಗೂ ಜಗಳವಾಗಿತ್ತು ಎನ್ನಲಾಗಿದೆ.
ಈ ಮಧ್ಯೆ ಬೆಂಗಳೂರಿನಿಂದ ಕಾರಿನಲ್ಲಿ ಯುವತಿಯನ್ನ ಕರೆದೊಯ್ದಿದ್ದ ನಾಗೇಂದ್ರ ಯುವತಿ ಜತೆ ಜಗಳವಾಡಿದ್ದು. ಜಗಳದ ನಡುವೆ ಯುವತಿಗೆ ನಾಗೇಂದ್ರ ಚಾಕು ಇರಿದಿದ್ದಾನೆ. ಹಲ್ಲೆಗೊಳಗಾದ ಯುವತಿ ತಕ್ಷಣ ಕಾರಿನ ಡೋರ್ ತೆಗೆದು ಹೊರಗಿಳಿದಿದ್ದು ಕಾರು ಚಾಲಕ ಸಹಾಯಕ್ಕೆ ಆಗಮಿಸಿದ್ದರು.
ಈ ವೇಳೆ ನಾಗೇಂದ್ರ ಏಕಾಏಕಿ ಕಾರನ್ನು ಸ್ಪೋಟಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ನಾಡಬಾಂಬ್ ಬಳಸಿ ಕಾರು ಸ್ಫೋಟಿಸಿರುವ ಶಂಕೆ ವ್ಯಕ್ತವಾಗಿದೆ.
Key words: Young man, commits suicide, car, stabbing, lover






