Monday, August 31, 2026

BDA Apartments

Home Cinema ರಂಗಭೂಮಿ ಯುವ ಕಲಾವಿದ ವಿಕ್ರಮ್ ಕೋವಿಡ್ ಗೆ ಬಲಿ…

ರಂಗಭೂಮಿ ಯುವ ಕಲಾವಿದ ವಿಕ್ರಮ್ ಕೋವಿಡ್ ಗೆ ಬಲಿ…

ಮೈಸೂರು,ಮೇ,25,2021(www.justkannada.in):  ರಂಗಭೂಮಿ ಯುವ ಕಲಾವಿದ ವಿಕ್ರಮ್ (37) ಕೋವಿಡ್ ಗೆ ಬಲಿಯಾಗಿದ್ದಾರೆ.jk

ನಾಲ್ಕು ದಿನಗಳ ಹಿಂದೆ  ಕಲಾವಿದ ವಿಕ್ರಮ್ ಗೆ  ಕೊರೊನಾ ಪಾಸಿಟಿವ್ ಆಗಿತ್ತು. ಈ ಮಧ್ಯೆ ಇಂದು ಉಸಿರಾಟದ ಸಮಸ್ಯೆಯಿಂದಾಗಿ ವಿಕ್ರಮ್ ರನ್ನ ಬನ್ನೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ವಿಕ್ರಮ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟದ್ದಾರೆ.young artist -Vikram  death-covid-mysore

ಟಿವಿ ಕಾರ್ಯಕ್ರಮಗಳಲ್ಲಿ ಮೆಂಟರ್ ಆಗಿ ಕೆಲಸ ಮಾಡಿದ್ದ ಯುವ ರಂಗ ಶಿಕ್ಷಕ ವಿಕ್ರಮ್, ಮಲೆಗಳಲ್ಲಿ ಮದುಮಗಳು ಹಾಗೂ ಇತರ ನಾಟಕಗಳಲ್ಲಿ ಅಭಿನಯಿಸಿ ನಾಟಕ ನಿರ್ದೇಶನ ಮಾಡುತ್ತಿದ್ದರು. ವಿಕ್ರಮ್ ಅವರ ತಂದೆ ಕೂಡ ವೆಂಟಿಲೇಟರ್ ನಲ್ಲಿದ್ದು ಇದೀಗ ವಿಕ್ರಮ್ ಕುಟುಂಬ ನೋವಿನಲ್ಲಿ ಮುಳುಗಿದೆ.  ಕೋವಿಡ್ ಗೆ ಕಲಾವಿದನ ಕುಟುಂಬ ನಲುಗಿಹೋಗಿದೆ.

Key words: young artist -Vikram  death-covid-mysore