Saturday, August 8, 2026

BDA Apartments

Home Front Page ಮದ್ಯಪ್ರಿಯರಿಗೆ ಜೇಬಿಗೆ ಕತ್ತರಿ: 17ರಷ್ಟು ಅಬಕಾರಿ ಸುಂಕ ಹೆಚ್ಚಳ ಘೋಷಿಸಿದ ಯಡಿಯೂರಪ್ಪ

ಮದ್ಯಪ್ರಿಯರಿಗೆ ಜೇಬಿಗೆ ಕತ್ತರಿ: 17ರಷ್ಟು ಅಬಕಾರಿ ಸುಂಕ ಹೆಚ್ಚಳ ಘೋಷಿಸಿದ ಯಡಿಯೂರಪ್ಪ

ಬೆಂಗಳೂರು, ಮೇ 06, 2020 (www.justkannada.in): ರಾಜ್ಯ ಸರ್ಕಾರವು ಮದ್ಯ ಪ್ರಿಯರಿಗೆ ಶಾಕಿಂಗ್ ನ್ಯೂಸ್  ನೀಡಿದ್ದು, ರಾಜ್ಯದಲ್ಲಿ ಶೇ.17 ರಷ್ಟು ಅಬಕಾರಿ ಸುಂಕ ಹೆಚ್ಚಳ ಮಾಡಿದೆ.

ರಾಜ್ಯಾದ್ಯಂತ ಮದ್ಯದಂಗಡಿಗಳು ಓಪನ್ ಆದ ಬೆನ್ನಲ್ಲೇ  ರಾಜ್ಯದಲ್ಲಿ ಮದ್ಯದ ಮೇಲಿನ ಅಬಕಾರಿ ಸುಂಕ ಶೇ. 17 ರಷ್ಟು ಹೆಚ್ಚಳ ಮಾಡಲು ನಿರ್ಧರಿಸಲಾಗಿದ್ದು, ಒಂದೆರಡು ದಿನಗಳಲ್ಲಿ ಇದು ಜಾರಿಗೆ ಬರಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪತಿಳಿಸಿದ್ದಾರೆ.

ಅಂಧ್ರಪ್ರದೇಶ ಸರ್ಕಾರ ಶೇ. 50 ರಷ್ಟು, ದೆಹಲಿ ಸರ್ಕಾರ ಶೇ. 70 ರಷ್ಟು ವಿಶೇಷ ಕೊರೊನಾ ತೆರಿಗೆ ಹಾಕಿದೆ. ಅದೇ ರೀತಿ ರಾಜ್ಯದಲ್ಲಿಯೂ ಅಬಕಾರಿ ಸುಂಕ ಶೇ. 17 ರಷ್ಟು ಹೆಚ್ಚಳ ಮಾಡಿದ್ದು, ಎರಡು ದಿನಗಳಲ್ಲಿ ಅಧಿಕೃತ ಘೋಷಣೆಯಾಗಲಿದೆ.