Sunday, October 25, 2026

Dasara Wishes

Happy Dasara
Home Cinema ಸಲಾರ್’ನಲ್ಲಿ ಪ್ರಭಾಸ್ ಜೊತೆ ‘ರಾಕಿ ಭಾಯ್’ !?

ಸಲಾರ್’ನಲ್ಲಿ ಪ್ರಭಾಸ್ ಜೊತೆ ‘ರಾಕಿ ಭಾಯ್’ !?

ಬೆಂಗಳೂರು, ಆಗಸ್ಟ್ 12, 2022 (www.justkannada.in): ಸ್ಯಾಂಡಲ್ ವುಡ್ ನಲ್ಲಿ ಹೊಸದೊಂದು ಸಿನಿಮಾ ಸುದ್ದಿ ಹರಿದಾಡುತ್ತಿದೆ.

ಹೌದು, ನಟ ಯಶ್ ಮತ್ತು ಪ್ರಭಾಸ್ ಒಂದೆ ಸಿನಿಮಾದಲ್ಲಿ ಇರಲಿದ್ದಾರೆ ಎನ್ನು ಬಗ್ಗೆ ಸುದ್ದಿ ಹಬ್ಬಿದೆ. ಮೂಲಗಳ ಮಾಹಿತಿಯಂತೆ, ನಟ ಯಶ್ ಪ್ರಭಾಸ್ ಜೊತೆಗೆ ತೆರೆಹಂಚಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದಲ್ಲಿ ನಟ ಯಶ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಸಲಾರ್ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಯಶ್ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸ್ಯಾಂಡಲ್ ವುಡ್ ಜತೆಗೆ ಟಾಲಿವುಡ್‌ನಲ್ಲಿ ಹೀಗೊಂದು ಸುದ್ದಿ ಹಬ್ಬಿದೆ. ನಟ ರಾಕಿಂಗ್ ಸ್ಟಾರ್ ಯಶ್, ಪ್ರಭಾಸ್ ಜೊತೆಗೆ ಸಲಾರ್ ಸಿನಿಮಾದಲ್ಲಿ ತೆರೆಹಂಚಿಕೊಳ್ಳುತ್ತಾರಂತೆ ಎಂಬ ಸುದ್ದಿ ಕೇಳಿ ಅಭಿಮಾನಿಗಳೂ ಖುಷಿಯಾಗಿದ್ದಾರೆ. ಆದರೆ ಇದು ಇನ್ನೂ ಅಧಿಕೃತವಾಗಬೇಕಿದೆ.