ಹೊಸ ಮನೆ ಗೃಹ ಪ್ರವೇಶ ಮಾಡಿದ ಯಶ್-ರಾಧಿಕಾ

ಬೆಂಗಳೂರು ಜುಲೈ 02, 2021 (www.justkannada.in): ರಾಕಿಂಗ್​ ಸ್ಟಾರ್​ ಯಶ್​ ಹಾಗೂ ರಾಧಿಕಾ ಪಂಡಿತ್​ ಅವರ ಹೊಸ ಮನೆಯ ಗೃಹ ಪ್ರವೇಶ ಸರಳವಾಗಿ ನೆರವೇರಿದೆ.

ಆಪ್ತರ ಸಮ್ಮುಖದಲ್ಲಿ​ ಗೃಹ ಪ್ರವೇಶದ ಕಾರ್ಯಗಳನ್ನು ಯಶ್-ರಾಧಿಕಾ ದಂಪತಿ ನಡೆಸಿದ್ದಾರೆ. ಅಂದಹಾಗೆ ಪ್ರೆಸ್ಟೀಜ್​ ಗಾಲ್ಫ್​ ಅಪಾರ್ಟ್​​ಮೆಂಟ್​​ನಲ್ಲಿ ಯಶ್‌ ಹೊಸ ಮನೆ​ ಖರೀದಿಸಿದ್ದರು.

ಯಶ್​ ಮನೆಯ ಫೋಟೋಗಳು, ಗೃಹ ಪ್ರವೇಶ ಕಾರ್ಯಕ್ರಮದ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.

ಈ ಫೋಟೋಗಳಲ್ಲಿ ರಾಧಿಕಾ ಹಾಗೂ ಯಶ್ ಧರಿಸುವ ಬಟ್ಟೆ ಹಾಗೂ ಅವರ ಲುಕ್ ಗೆ ಅಭಿಮಾನಿಗಳು ಖುಷಿಯಾಗಿದ್ದಾರೆ.