ಕೇರಳದಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ.

ಬೆಂಗಳೂರು,ಜುಲೈ,2,2021(www.justkannada.in): ಕೇರಳದಿಂದ‌ ಕರ್ನಾಟಕಕ್ಕೆ  ಆಗಮಿಸುವ ಪ್ರಯಾಣಿಕರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.jk

ಕೇರಳದಿಂದ ಆಗಮಿಸುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇಡಲಾಗಿದ್ದು, ಕರ್ನಾಟಕ ಪ್ರವೇಶಕ್ಕೆ ಆರ್ ಟಿಪಿಸಿಆರ್ ನೆಗೆಟೀವ್ ರಿಪೋರ್ಟ್ ಕಡ್ಡಾಯಗೊಳಿಸಲಾಗಿದೆ. ವಿಮಾನ, ರೈಲ್ವೆ ಹಾಗೂ ರಸ್ತೆ ಸಾರಿಗೆಯಲ್ಲಿ ಆಗಮಿಸುವವರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ.

72 ಗಂಟೆಯೊಳಗಿನ ನೆಗೆಟಿವ್ ವರದಿ ಇದ್ರೆ ಮಾತ್ರ ರಾಜ್ಯಕ್ಕೆ ಎಂಟ್ರಿ ಕೊಡಬಹುದು. ಕರ್ನಾಟಕ ಕೇರಳ ಗಡಿ ಭಾಗದ ಚೆಕ್ ಪೋಸ್ಟ್ ಗಳಲ್ಲಿ ಕಡ್ಡಾಯ ತಪಾಸಣೆಗೆ ಸೂಚನೆ ನೀಡಲಾಗಿದ್ದು, ದಿನನಿತ್ಯದ ಓಡಾಟ, ವಿದ್ಯಾಭ್ಯಾಸ, ವ್ಯಾಪಾರ ವಹಿವಾಟಿಗೆ ದಿನನಿತ್ಯ ಸಂಚರಿಸುವವರು 15 ದಿನಗಳಿಗೊಮ್ಮೆ ಆರ್ ಟಿಪಿಸಿಆರ್ ಟೆಸ್ಟ್ ಮಾಡಿಸಿಕೊಳ್ಳುವುದು ಕಡ್ಡಾಯಗೊಳಿಸಲಾಗಿದೆ.

ENGLISH SUMMARY…

COVID Negative report compulsory for those coming from Kerala
Bengaluru, July 02, 2021 (www.justkannada.in): The State Government has issued orders making it mandatory for those who are coming to Karnataka from Kerala to produce COVID Negative reports.
People who come to Karnataka from Kerala are monitored intensely following reports of the fear of an increase in the number of Delta Plus COVID variants. Hence, producing RTPCR Negative reports has been made mandatory for all those who come from Kerala vial air, train, and road routes.
Only those who possess 72 hours old RTPCR Negative reports will be allowed to enter the State. Checking is intensified at the Karnataka-Kerala border. RTPCR test has also been made compulsory once in 15 days for those who travel daily for various reasons like education, business, etc.
Keywords: RTPCR / COVID test/ negative report/ compulsory/ Kerala

Key words: covid- Negative- Report -mandatory – travelers – Kerala