Thursday, August 27, 2026

BDA Apartments

Home Crime ಪೂಜೆಗೆ ಅರ್ಧ ಕೆ.ಜಿ.ಚಿನ್ನ ಇರಿಸಿ, ಪೂಜಾರಿ ಮಾಡಿದ್ದೇನು…?

ಪೂಜೆಗೆ ಅರ್ಧ ಕೆ.ಜಿ.ಚಿನ್ನ ಇರಿಸಿ, ಪೂಜಾರಿ ಮಾಡಿದ್ದೇನು…?

ಮೈಸೂರು,ನವೆಂಬರ್,05,2020(www.justkannada.in) :  ಪೂಜೆ ಮಾಡುವ ನೆಪದಲ್ಲಿ ಪೂಜಾರಿಯೊಬ್ಬ ಮನೆಯಲ್ಲಿ ಇಟ್ಟಿದ್ದ ಚಿನ್ನ ಕದ್ದು ಹೋಗಿದ್ದ ಪ್ರಕರಣ ಆರು ತಿಂಗಳ ನಂತರ ಮನೆಯವರ ಗಮನಕ್ಕೆ ಬಂದಿದೆ.jk-logo-justkannada-logo

ಜಿಲ್ಲೆಯ ಹುಣಸೂರು ತಾಲೂಕಿನ ಉಯಿಗೌಡನಹಳ್ಳಿಯ ನಿಂಗಪ್ಪ ಎಂಬುವವರ ಮನೆಯಲ್ಲಿ ಕಳೆದ ಆರು ತಿಂಗಳ ಹಿಂದೆ ಕೆ.ಆರ್.ನಗರ ತಾಲೂಕಿನ ಸಾತಿಗ್ರಾಮದ ಚೌಡೇಶ್ವರಿ ದೇವಾಲಯದ ಪೂಜಾರಿ ಮನು ಎಂಬಾತನಿಂದ ಮನೆಯಲ್ಲಿ ಪೂಜೆ ಮಾಡಿಸಿದ್ದಾರೆ. ಈ ವೇಳೆ ಮನೆಯ ವಾಸ್ತು ಸರಿ ಮಾಡುತ್ತೇನೆ ಎಂದು ಮನೆಗೆ ದಾರ ಹಾಗೂ ಕುಡಿಕೆಗಳನ್ನ ಕಟ್ಟಿದ್ದಾನೆ.

ಪೂಜೆಯಲ್ಲಿ ಭಾಗಿಯಾದವರು ತಮ್ಮ ಬಳಿ ಇರುವ ಚಿನ್ನವನ್ನ ಪೂಜೆಗೆ ಇಟ್ಟರೆ ಒಳಿತಾಗುತ್ತೆ

ಈ ವೇಳೆ ನಿಂಗಪ್ಪ ತಮ್ಮ ಸಂಬಂಧಿಕರಿಗೂ ಪೂಜೆ ಮಾಡಿಸುವ ವಿಚಾರವನ್ನ ತಿಳಿಸಿ ಪೂಜೆಗೂ ಅವರನ್ನು ಕರೆದಿದ್ದಾನೆ. ಈ ವೇಳೆ ಪೂಜೆಯಲ್ಲಿ ಭಾಗಿಯಾಗಿರುವವರು ತಮ್ಮ ಬಳಿ ಇರುವ ಚಿನ್ನವನ್ನ ಪೂಜೆಗೆ ಇಟ್ಟರೆ ಒಳಿತಾಗುತ್ತೆ ಎಂದು ಪೂಜಾರಿ ತಿಳಿಸಿದ್ದಾನೆ. ಅದರಂತೆ, ಪೂಜೆಗೆ ತಮ್ಮ ಬಳಿ ಇದ್ದ ಅರ್ಧ ಕೆ.ಜಿ.ಯಷ್ಟು ಚಿನ್ನವನ್ನ ಇಟ್ಟಿದ್ದಾರೆ. ಪೂಜೆ ಮುಗಿದ ನಂತರ ಅದನ್ನು ಬೀರುವಿನಲ್ಲಿ ಆರು ತಿಂಗಳ ಕಾಲ ಇಟ್ಟು ಆಯುಧ ಪೂಜೆ ಬಳಿಕ ತೆರೆದು ನೋಡಬೇಕು, ಇಲ್ಲದಿದ್ದರೆ ಕೆಡಕಾಗುತ್ತೆ ಎಂದು ಹೇಳಿದ್ದಾನೆ. ಅದರಂತೆ ಆರು ತಿಂಗಳ ನಂತರ ತೆರೆದು ನೋಡಿದಾಗ ಕಳ್ಳತನವಾಗಿರೋದು ಬೆಳಕಿಗೆ ಬಂದಿದೆ.

ಬಟ್ಟೆ ಬದಲಿಸುವ ನೆಪದಲ್ಲಿ ಕೋಣೆಗೆ ನುಗ್ಗಿ ಬೀರುವಿನಲ್ಲಿದ್ದ ಚಿನ್ನ ಕಳ್ಳತನ

worship-Half-kg-Gold-Put-worshipper-What-did-you-do...?

ನಂತರ ಈ ವಿಚಾರವನ್ನು ಬಿಳಿಕೆರೆ ಪೊಲೀಸರಿಗೆ ತಿಳಿಸಿದಾಗ ಪೂಜಾರಿಯನ್ನ ಕರೆದು ವಿಚಾರಿಸಿದಾಗ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಪೂಜೆ ಮುಗಿದ ಬಳಿಕ ಬಟ್ಟೆ ಬದಲಿಸುವ ನೆಪದಲ್ಲಿ ಕೋಣೆಗೆ ನುಗ್ಗಿ ಬೀರುವಿನಲ್ಲಿದ್ದ ಚಿನ್ನವನ್ನ ಕದ್ದಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

key words : worship-Half-kg-Gold-Put-worshipper-What-did-you-do…?