Monday, October 12, 2026

Dasara Wishes

BJP DasraWishes_JK DasraWishes JK
Happy Dasara
Home Front Page ಸಂಪುಟದಲ್ಲಿ ಬದಲಾವಣೆ ವಿಚಾರ ತಳ್ಳಿಹಾಕಿದ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಸಂಪುಟದಲ್ಲಿ ಬದಲಾವಣೆ ವಿಚಾರ ತಳ್ಳಿಹಾಕಿದ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಕಲಬುರುಗಿ,ಆಗಸ್ಟ್,27,2026 (www.justkannada.in): ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಸಚಿವ ಸಂಪುಟದಲ್ಲಿ ಬದಲಾವಣೆಯಾಗಲಿದೆ ಎಂಬ ವಿಚಾರ ಸುದ್ದಿಯಾಗುತ್ತಿದ್ದು ಆದರೆ ಇದನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಳ್ಳಿ ಹಾಕಿದ್ದಾರೆ.

ಈ ಕುರಿತು ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನನಗೆ ಈ ಬಗ್ಗೆ ಯಾವುದೇ ಸುದ್ದಿ ಬಂದಿಲ್ಲ. ನಾನು ಈಗ ಕಲಬುರುಗಿಯಲ್ಲಿದ್ದೇನೆ. ಯಾವ ಸುದ್ದಿಯೂ ಬಂದಿಲ್ಲ.  ಏನಾದರೂ ಫೈಲ್ ಬರಬೇಕಾದರೇ ನನ್ನ ಬಳಿಯೇ ಬರಬೇಕು ತಾನೇ?  ಸಂಪುಟದಿಂದ ಯಾರನ್ನೇ ತೆಗೆಯಲು,  ಯಾರನ್ನೇ ಸೇರಿಸಲು ನನ್ನ ಬಳಿಯೇ ಬರಬೇಕು ಎಂದು ಸ್ಪಷ್ಟಪಡಿಸಿದರು.ಸಂಪುಟದಲ್ಲಿ ಬದಲಾವಣೆ ವಿಚಾರ mallikarjun kharge

ನೇಪಾಳದಲ್ಲಿ ಪ್ರವಾಹ ಕುರಿತು ಕಳವಳ ವ್ಯಕ್ತಪಡಿಸಿದ ಮಲ್ಲಿಕಾರ್ಜುನ ಖರ್ಗೆ, ನೇಪಾಳದಲ್ಲಿ ಬಹಳ ದೊಡ್ಡ ದುರಂತ ಆಗಿದೆ.  ಇದು ಹೆಚ್ಚಿನ ದುಃಖ ತಂದಿದೆ. ನಾಪತ್ತೆ ಆದವರನ್ನ ಹುಡುಕಬೇಕು.  ನಾಪತ್ತೆಯಾದ ಕುಟುಂಬಕ್ಕೆ ತುಂಬಲಾದ ನಷ್ಟವಾಗಿದೆ.  ಸಂಕಷ್ಟದ ಸಮಯದಲ್ಲಿ ನಾವೆಲ್ಲರೂ ಒಂದಾಗಬೇಕು ಎಂದು ತಿಳಿಸಿದರು.

Key words: AICC President, Mallikarjun Kharge, cabinet, reshuffle