ಬೆಂಗಳೂರು,ಜುಲೈ,28,2023(www.justkannada.in): ಹೆಪಟೈಟಿಸ್ ವೈರಸ್ ಗಳು ಸಾಂಕ್ರಾಮಿಕವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇವುಗಳು ಸಾವನ್ನ ಕೂಡ ಉಂಟು ಮಾಡಬಹುದು. ಹೀಗಾಗಿ ಆರೋಗ್ಯಕರವಾದ ಆಹಾರ ಸೇವಿಸುತ್ತಾ ಲಿವರ್ ಬಗ್ಗೆ ಕಾಳಜಿ ತೆಗೆದುಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಆಸ್ಪತ್ರೆ ಎಂಡಿ ಡಾ.ಉಮೇಶ್ ಜಾಲಿಹಾಳ್ ಹೇಳಿದರು.![]()
ವಿಶ್ವ ಹೆಪಟೈಟಿಸ್ ದಿನದ ಅಂಗವಾಗಿ ಕರ್ನಾಟಕ ಗ್ಯಾಸ್ಟ್ರೋ ಸೆಂಟರ್ ವತಿಯಿಂದ ಇಂದು ಮ್ಯಾರಥಾನ್ ಏರ್ಪಿಡಿಸಿತ್ತು. ಈ ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಮಾಜಿಸಚಿವ ಗೋಪಾಲಯ್ಯ, ಮಾಜಿ ಶಾಸಕ ನರೇಂದ್ರ ಬಾಬು, ಆಸ್ಪತ್ರೆ ಎಂಡಿ ಡಾ.ಉಮೇಶ್ ಜಾಲಿಹಾಳ್ ಮೊದಲಾದವರು ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ಡಾ.ಉಮೇಶ್ ಜಾಲಿಹಾಳ, ಯಕೃತ್ತಿನ (ಲಿವರ್) ಉರಿಯೂತದಿಂದ ಉಂಟಾಗುವ ಕಾಯಿಲೆಯೇ ಹೆಪಟೈಟಿಸ್. ಎ, ಬಿ, ಸಿ, ಡಿ ಮತ್ತು ಇ ಇವು ಐದು ಪ್ರಮುಖವಾದ ಹೆಪಟೈಟಿಸ್ ವೈರಸ್ ಗಳು. ಬಿ ಮತ್ತು ಸಿ ವಿಧಗಳು ಲಕ್ಷಾಂತರ ಜನರಲ್ಲಿ ದೀರ್ಘಕಾಲದ ಕಾಯಿಲೆಗೆ ಕಾರಣವಾಗುತ್ತದೆ. ಇವು ಯಕೃತ್‌ನ ಸಿರೋಸಿಸ್ ಮತ್ತು ಕ್ಯಾನ್ಸರ್ ಗೆ ಸಾಮಾನ್ಯ ಕಾರಣವಾಗಿದೆ ಎಂದು ವಿವರಿಸಿದರು.
Key words: World Hepatitis Day- Marathon -Karnataka -Gastro Center..







