Friday, October 16, 2026

Dasara Wishes

ಮಾವಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹ: ಇಂದು ಕೋಲಾರ ಬಂದ್ DasraWishes_JK DasraWishes JK
Happy Dasara
Home Front Page ಪಬ್ಲಿಕ್ TV ಈಗ ರಾಜ್ಯದಲ್ಲಿ ನಂಬರ್ 1

ಪಬ್ಲಿಕ್ TV ಈಗ ರಾಜ್ಯದಲ್ಲಿ ನಂಬರ್ 1

ಬೆಂಗಳೂರು,ಫೆಬ್ರವರಿ,21,2026 (www.justkannada.in): ಕನ್ನಡ ಟಿವಿ ಪತ್ರಿಕೋದ್ಯಮ ಈ ವಾರ ಅಚ್ಚರಿಯ ಬೆಳವಣಿಗೆಗೆ ಕಾರಣವಾಗಿದೆ. ಕಳೆದ 20 ವರ್ಷಗಳಿಂದ ಟಿವಿ ಮಾಧ್ಯಮದಲ್ಲೇ ಅಧಿಪತ್ಯ ಸಾಧಿಸಿ ನಂಬರ್ ಪಟ್ಟದಲ್ಲಿದ್ದ ಟಿವಿ9 ಹಿಂದಿಕ್ಕಿ ಪಬ್ಲಿಕ್ ಟಿವಿ ನಂಬರ್ ಒನ್ ಪಟ್ಟಕ್ಕೇರಿದೆ. ಆ ಮೂಲಕ ಮಾಧ್ಯಮ ಲೋಕವೇ ನಿಬ್ಬೆರಗಾಗುವಂತೆ ಮಾಡಿದೆ.

ಬಾರ್ಕ್ ನೀಡಿರುವ ಈ ವಾರ (06ರಲ್ಲಿ) ಕನ್ನಡ ನ್ಯೂಸ್ ಚಾನೆಲ್‌ ಗಳ ಟಿಆರ್‌ಪಿ ಏರುಪೇರಾಗಿದೆ. BARC ವರದಿ ಪ್ರಕಾರ, ಕರ್ನಾಟಕದ ನ್ಯೂಸ್ ಚಾನೆಲ್‌ ಗಳ ಟಿಆರ್‌ ಪಿಯಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ. ರಾಜ್ಯ ಮಟ್ಟದಲ್ಲಿ ಒಟ್ಟು ನ್ಯೂಸ್ ಟೋಟಲ್ 351ರಿಂದ 321ಕ್ಕೆ ಇಳಿಕೆಯಾಗಿದ್ದು, ಶೇಕಡಾ 9ರಷ್ಟು ಕುಸಿತ ಕಾಣುವ ಮೂಲಕ ದಾಖಲಾಗಿದೆ.ಪಬ್ಲಿಕ್ TV ಈಗ ರಾಜ್ಯದಲ್ಲಿ ನಂಬರ್ 1 public1

ಈವರೆಗೆ ನಂಬರ್ 3 ಸ್ಥಾನದಲ್ಲಿದ್ದ ಏಷ್ಯಾನೆಟ್ ಸುವರ್ಣ ನ್ಯೂಸ್‌ ಕೂಡ  ಕುಸಿತ ಕಂಡಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ರಾಜ್ಯ ಮಟ್ಟದಲ್ಲಿ 33ರಿಂದ 28ಕ್ಕೆ ಇಳಿದು 15% ಕುಸಿತ ಕಂಡಿದೆ. ಬೆಂಗಳೂರು ಮಾರುಕಟ್ಟೆಯಲ್ಲಿ 24% ಇಳಿಕೆ, Below 10L Urban ವಿಭಾಗದಲ್ಲಿ 31% ಕುಸಿತ, ಗ್ರಾಮೀಣ ಭಾಗದಲ್ಲಿ 6% ಇಳಿಕೆ ದಾಖಲಾಗಿದೆ.

ಈ ನಡುವೆ ನ್ಯೂಸ್18 ಕನ್ನಡ ಕೊಂಚ ಏರಿಕೆ ಕಂಡಿದ್ದರೂ ನಂಬರ್ 3 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ನ್ಯೂಸ್18 ಕನ್ನಡ ರಾಜ್ಯದಲ್ಲಿ 65ರಿಂದ 68ಕ್ಕೆ ಏರಿ 5% ವೃದ್ಧಿ ಕಂಡಿದೆ. ಗ್ರಾಮೀಣ ಪ್ರದೇಶದಲ್ಲಿ 7% ಹಾಗೂ Below 10L Urban ವಿಭಾಗದಲ್ಲಿ 9% ಏರಿಕೆ ಕಂಡುಬಂದಿದೆ.ಪಬ್ಲಿಕ್ TV ಈಗ ರಾಜ್ಯದಲ್ಲಿ ನಂಬರ್ 1 public.jpg2

ಪಬ್ಲಿಕ್ ಟಿವಿ ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಕೊಂಚ ಇಳಿಕೆ ಕಂಡಿದ್ದರೂ ( ನಂಬರ್ ನಲ್ಲಿ  – 75ರಿಂದ 73ಕ್ಕೆ ಇಳಿದು 3%)  ನಂಬರ್ 1 ಪಟ್ಟಕ್ಕೆ ಏರಿದೆ. ಬೆಂಗಳೂರು ಮಾರುಕಟ್ಟೆಯಲ್ಲಿ 10% ಇಳಿಕೆ ಕಂಡುಬಂದಿದ್ದರೂ, Below 10L Urban ವಿಭಾಗದಲ್ಲಿ 5% ಏರಿಕೆ ಕಂಡಿದೆ.

ಈ‌ ನಡುವೆ , ಟಿವಿ9 ಕನ್ನಡಕ್ಕೆ ದೊಡ್ಡ ಹೊಡೆತ ಬಿದ್ದಿದೆ.  ಟಿವಿ9 ಕನ್ನಡ ರಾಜ್ಯದಲ್ಲಿ 94ರಿಂದ 71ಕ್ಕೆ ಇಳಿದು 24% ಕುಸಿತ ಕಂಡಿದೆ. ಬೆಂಗಳೂರು ವಿಭಾಗದಲ್ಲಿ 32% ಹಾಗೂ ಗ್ರಾಮೀಣ ಭಾಗದಲ್ಲಿ 16% ಇಳಿಕೆ ಕಾಣುವ ಮೂಲಕ ಇಂದೆಂದೂ ಕಂಡರಿದ ರೀತಿಯಲ್ಲಿ ದಾಖಲೆ ಪ್ರಮಾಣದ ಇಳಿಕೆಯಾಗಿದೆ.

 ಇತರೆ ಚಾನೆಲ್‌ ಗಳ ಸ್ಥಿತಿ

ನ್ಯೂಸ್ 1st ಕನ್ನಡಕ್ಕೆ ರಾಜ್ಯದಲ್ಲಿ 9% ಏರಿಕೆ ಕಂಡರೆ, ಟಿವಿ5 ಕನ್ನಡ 35% ವೃದ್ಧಿ ಕಂಡು ಗಮನ ಸೆಳೆದಿದೆ.

ಈ ನಡುವೆ , ಆರ್ ಕನ್ನಡ 27% ಕುಸಿತ, ಪವರ್ ಟಿವಿಗೆ 8% ಇಳಿಕೆ ಕಂಡರೆ ರಾಜ್ ನ್ಯೂಸ್ ಕನ್ನಡ ಸ್ಥಿರವಾಗಿದೆ. ಈ‌ ನಡುವೆ ಗ್ಯಾರಂಟಿ ನ್ಯೂಸ್ 24×7ಗೆ 57% ಕುಸಿತ ಕಂಡು ಕೊನೆ ಸ್ಥಾನದಲ್ಲಿದೆ.

Key words: Public TV, now, number1,  state.