ವಿಶ್ವಕಪ್ ಕ್ರಿಕೆಟ್: ಸೆಮೀಸ್’ಗೆ ತಲುಪುವ ನಾಲ್ಕನೇ ತಂಡ ಯಾವುದು? ಭಾರತಕ್ಕೆ ಎದುರಾಳಿ ಯಾರಾಗಬಹುದು…?!

ಬೆಂಗಳೂರು, ನವೆಂಬರ್ 08, 2023 (www.justkannada.in): ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಪಾಯಿಂಟ್​ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ. ಹೀಗಾಗಿ ಈ ಎರಡು ತಂಡಗಳು ಸೆಮಿಫೈನಲ್​ನಲ್ಲಿ ಮುಖಾಮುಖಿಯಾಗಲಿವೆ.

ಪಾಯಿಂಟ್ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿರುವ ಭಾರತ ಯಾರನ್ನು ಎದುರಿಸಲಿದೆ ಎಂಬ ಕುತೂಹಲ ಕ್ರೀಡಾ ಪ್ರೇಮಿಗಳಲ್ಲಿ ಮೂಡಿದೆ.  ಪ್ರಸ್ತುತ ನಾಲ್ಕನೇ ಸ್ಥಾನಕ್ಕಾಗಿ ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ಫೈಟ್ ನಡೆಯುತ್ತಿದೆ. ಈ ಮೂರು ತಂಡಗಳು ತಲಾ 8 ಅಂಕಗಳನ್ನು ಹೊಂದಿವೆ.

ಹೀಗಾಗಿ ಮುಂದಿನ ಪಂದ್ಯದಲ್ಲಿ ಗೆಲುವಿನೊಂದಿಗೆ ನೆಟ್ ರನ್ ರೇಟ್ ಅನ್ನು ಉತ್ತಮ ರೀತಿಯಲ್ಲಿ ಕಾಯ್ದುಕೊಳ್ಳುವುದು ಸವಾಲಾಗಿದೆ. ಹೀಗಾಗಿ ಮೂರೂ ತಂಡಗಳು ಪರಸ್ಪರರನ್ನು ಸೋಲಿಸಲು ತೀವ್ರ ಪ್ರಯತ್ನ ನಡೆಸಲಿವೆ.

ಕೊನೆಯ ಪಂದ್ಯದಲ್ಲಿ ಮೂವರೂ ಗೆದ್ದರೆ, ನೆಟ್ ರನ್​ರೇಟ್ ಉತ್ತಮವಾಗಿರುವ ತಂಡ ಸೆಮಿಫೈನಲ್​ಗೇರಲಿದೆ. ಹೀಗಾಗಿ ಒಂದು ಸ್ಥಾನಕ್ಕಾಗಿ ಈಗ ಮೂರು ತಂಡಗಳ ನಡುವೆ ಕದನ ನಡೆಯುತ್ತಿದೆ.