Thursday, August 20, 2026

BDA Apartments

Home Front Page ಕೆಲಸ ಮಾಡೋದು ನಾವು: ವೋಟ್ ಮಾತ್ರ ಬಿಜೆಪಿಗೆ ಯಾಕೆ..?- ನಿನ್ನೆ ಸಿಎಂ, ಈಗ ಮಾಜಿ ಸಿಎಂ...

ಕೆಲಸ ಮಾಡೋದು ನಾವು: ವೋಟ್ ಮಾತ್ರ ಬಿಜೆಪಿಗೆ ಯಾಕೆ..?- ನಿನ್ನೆ ಸಿಎಂ, ಈಗ ಮಾಜಿ ಸಿಎಂ ಸಿದ್ಧರಾಮಯ್ಯ ಪ್ರಶ್ನೆ…

ಬಾಗಲಕೋಟೆ,ಜೂ,27,2019(www.justkannada.in): ಬಸ್ ತಡೆದು ಪ್ರತಿಭಟನೆ ಮಾಡಿದ್ದ ವೈಟಿಪಿಎಸ್ ಸಿಬ್ಬಂದಿ ಮೇಲೆ ಗರಂ ಆಗಿ, ಕೆಲಸಕ್ಕೆ ನಾವು ವೋಟ್ ಮಾತ್ರ ಮೋದಿಗೆ ಹಾಕ್ತೀರಾ..? ಎಂದು ಸಿಎಂ ಹೆಚ್. ಡಿ ಕುಮಾರಸ್ವಾಮಿ ನೀಡಿದ್ದ ಹೇಳಿಕೆ ಸಾಕಷ್ಟು ಟೀಕೆಗೆ ಗುರಿಯಾಗಿದೆ.  ಈ ಬೆನ್ನಲ್ಲೆ ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಇದೇ ರೀತಿಯ ಹೇಳಿಕೆ ನೀಡಿದ್ದಾರೆ.

ಹೌದು, ಇಂದು ಬಾಗಲಕೋಟೆ ಜಿಲ್ಲೆಯ ತಮ್ಮ ಕ್ಷೇತ್ರ ಬಾದಾಮಿಯ  ಆಲೂರ ಕೆ.ಎಸ್ ಗ್ರಾಮದಲ್ಲಿ ಮಾತನಾಡುತ್ತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಕೆಲಸ ಮಾಡೋದು ನಾವು, ವೋಟ್ ಮಾತ್ರ ಬಿಜೆಪಿಗೆ ಹಾಕ್ತೀರಿ ಯಾಕೆ…? ಎಂದು ತಮ್ಮ ಕ್ಷೇತ್ರದ ಜನತೆಗೆ ಪ್ರಶ್ನಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಲ್ಲಿ  ಬಿಜೆಪಿಗೆ ಲೀಡ್ ಬಂದಿದ್ದಕ್ಕೆ ಬೇಸರ ವ್ಯಕ್ತಪಡಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ನಾವು ಕೆಲಸ ಮಾಡಿದ್ರೂ ಬಿಜೆಪಿಗೆ ವೋಟ್ ಹಾಕ್ತೀರಿ. ಅಭಿವೃದ್ದಿ ಕೆಲಸ ಮಾಡುವವರಿಗೆ  ನೀವು ವೋಟ್ ಹಾಕಲ್ಲ.  ನೀವೇಕೆ ಹೀಗೆ ಮಾಡುತ್ತೀರಿ ಅಂತಾ ನನಗೆ ಗೊತ್ತಾಗುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ನಾನು ಬಾದಾಮಿ ಶಾಸಕನಾದ ಮೇಲೆ  ಕ್ಷೇತ್ರಕ್ಕೆ 1300 ಕೋಟಿ ಅನುದಾನ ತಂದಿದ್ದೇನೆ. ಅನ್ನಭಾಗ್ಯ, ಶೂಭಾಗ್ಯ, ಬಟ್ಟೆ ಹಾಲು ಅಕ್ಕಿ ಕೋಡೋರು ನಾವು ಆದ್ರೆ ಬಿಜೆಪಿಗೆ ವೋಟ್ ಹಾಕ್ತೀರಿ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

Key words: work-vote -only – BJP- Former CM Siddaramaiah -question -badami