ಮಹಿಳಾ ಮೀಸಲಾತಿ ಮಸೂದೆ ಲೋಕಸಭೆಯಲ್ಲಿ ಮಂಡನೆ.

ನವದೆಹಲಿ,ಸೆಪ್ಟಂಬರ್,19,2023(www.justkannada.in):  ಸಂಸತ್ ವಿಶೇಷ ಅಧಿವೇಶನ ನಡೆಯುತ್ತಿದ್ದು ಲೋಕಸಭೆಯಲ್ಲಿ ಇಂದು ಮಹಿಳಾ ಮೀಸಲಾತಿ ಮಸೂದೆಯನ್ನ ಕೇಂದ್ರ ಕಾನೂನು ಸಚಿವ  ಅರ್ಜುನ್ ರಾಮ್   ಮೇಘ್ವಾಲ್ ಮಂಡಿಸಿದರು.

ನಿನ್ನೆಯಿಂದ ಸಂಸತ್ ವಿಶೇಷ ಅಧಿವೇಶನ ಆರಂಭವಾಗಿದ್ದು ಇಂದಿನಿಂದ ಹೊಸ ಸಂಸತ್ ಭವನದಲ್ಲಿ ಕಲಾಪ ನಡೆಯುತ್ತಿದೆ. ಈ ನಡುವೆ .   ಲೋಕಸಭೆ, ರಾಜ್ಯಸಭೆ, ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ 33ರಷ್ಟು  ಮೀಸಲಾತಿ ಕಲ್ಪಿಸುವ ಮಸೂದೆ ಇಂದು ಲೋಕಸಭೆಯಲ್ಲಿ ಮಂಡನೆಯಾಗಿದೆ.

Key words: Women’s -Reservation -Bill – Lok Sabha.