ಅರ್ಥವ್ಯವಸ್ಥೆಯಲ್ಲಿ ಭಾರತ ಶೀಘ್ರದಲ್ಲೇ 3ನೇ ಸ್ಥಾನಕ್ಕೆ ಬರಲಿದೆ-ಪ್ರಧಾನಿ ನರೇಂದ್ರ ಮೋದಿ.

ನವದೆಹಲಿ,ಸೆಪ್ಟಂಬರ್,19,2023(www.justkannada.in): ಅರ್ಥವ್ಯವಸ್ಥೆಯಲ್ಲಿ ಭಾರತ ಶೀಘ್ರದಲ್ಲೇ 3ನೇ ಸ್ಥಾನಕ್ಕೆ ಬರಲಿದೆ. ವಿಶ್ವದಲ್ಲಿ ಇಂದು ಭಾರತ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಭಾರತದಲ್ಲಿನ ವೇಗದ ಅಭಿವೃದ್ಧಿ ವಿಶ್ವ ಬೆರಗುಗಣ್ಣಿನಿಂದ ನೋಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇಂದಿನಿಂದ ಹಳೇ ಸಂಸತ್​ ಭವನದಲ್ಲಿ ಕಲಾಪಕ್ಕೆ ವಿದಾಯ ಹಿನ್ನೆಲೆ ಸಂಸತ್​ ಭವನದ ಸೆಂಟ್ರಲ್ ಹಾಲ್​ ನಲ್ಲಿ ಭಾಷಣ ಮಾಡಿದ ಪ್ರಧಾನಿ ಮೋದಿ, ಹೊಸ ಸಂಸತ್ ಭವನದತ್ತ ಹೆಜ್ಜೆ ಇಡುತ್ತಿದ್ದೇವೆ ಸೆಂಟ್ರಲ್ ಹಾಲ್ ನಮ್ಮ ಭಾವನೆಗಳಿಂದ ತುಂಬಿದೆ . ಹೊಸ ಭವಿಷ್ಯವನ್ನು ಆರಂಭಿಸಲಿದ್ದೇವೆ. ಸೆಂಟ್ರಲ್ ಹಾಲ್ ಹಲವು ಐತಿಹಾಸಿಕ ವಿಷಯಗಳಿಗೆ ಸಾಕ್ಷಿಯಾಗಿದೆ.  ಹಳೇ ಸಂಸತ್  ಭವನ್ ಭಾವನೆಗಳೊಂದಿಗೆ ಬೆಸೆದುಕೊಂಡಿದೆ.  ಸಂವಿಧಾನವನ್ನ ಇದೇ ಸಂಸತ್ ಭವನದಲ್ಲಿ ಅನುಷ್ಠಾನಗೊಳಿಸಲಾಗಿದೆ. ಹಳೇ ಸಂಸತ್ ಭವನದಲ್ಲಿ 4000 ಸಾವಿರಕ್ಕೂ ಹೆಚ್ಚು ಕಾನೂನು ಜಾರಿಯಾಗಿದೆ ಎಂದರು.

ಇದೇ ಸಂಸತ್ ಭವನದಲ್ಲಿ ನಮ್ಮ ಸರ್ಕಾರ ಹಲವು ಮಹತ್ವದ ನಿರ್ಧಾರ ತೆಗೆದುಕೊಂಡಿದೆ . ಇದೇ ಸಂಸತ್ ಭವನದಲ್ಲಿ ಮುಸ್ಲೀಂ ಮಹಿಳೆರಿಯಗೆ ನ್ಯಾಯ ಒದಗಿಸಿದ್ದೇವೆ. ತ್ರಿವಳಿ ತಲಾಖ್ ರದ್ದುಗೊಳಿಸಿ ನ್ಯಾಯ ಕೊಡಿಸಿದ್ದೇವೆ.  ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ & ಅಭಿವೃದ್ಧಿಯತ್ತ ಸಾಗುತ್ತಿದೆ. ಭಾರತ ನಿಲ್ಲುವುದಿಲ್ಲ, ಸದಾ ಹೊಸದನ್ನು ಕಲಿಯಲು ಪ್ರಯತ್ನಿಸುತ್ತದೆ. ಆತ್ಮನಿರ್ಭರ್ ಯೋಜನೆಯನ್ನು ಯಶಸ್ವಿಗೊಳಿಸಲು ನಿರಂತರ ಪ್ರಯತ್ನ ಮಾಡಲಾಗುತ್ತಿದೆ ಎಂದರು.

Key words: India- will -soon – 3rd place – economy-PM- Narendra Modi.