ಬೆಂಗಳೂರಿನಲ್ಲಿ ಕೊರೋನಾಗೆ ಪೌರಕಾರ್ಮಿಕ ಮಹಿಳೆ ಬಲಿ…

ಬೆಂಗಳೂರು,ಜು,16,2020(www.justkannada.in): ರಾಜ್ಯ ರಾಜಧಾನಿ ಬೆಂಗಳೂರು ಕೊರೋನಾ ವೈರಸ್ ನಿಂದ ತತ್ತರಿಸಿದ್ದು ಈಗಾಗಲೇ ಒಂದು ವಾರಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಈ ನಡುವೆ ಬೆಂಗಳೂರಿನಲ್ಲಿ ಸೋಂಕಿತರ ಪ್ರಮಾಣ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು ಇಂದು ಕೊರೋನಾಗೆ ಪೌರಕಾರ್ಮಿಕರೊಬ್ಬರು ಸಾವನ್ನಪ್ಪಿದ್ದಾರೆ.jk-logo-justkannada-logo

28 ವರ್ಷದ ಕೊರೋನಾ ಸೋಂಕಿತ ಮಹಿಳೆ ಚಿಕಿತ್ಸೆ ಫಲಿಸದೆ ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ಸೋಂಕಿತ ಮಹಿಳೆ ನಾಗೇನಹಳ್ಳಿ ವಾರ್ಡ್ ನ ಪೌರಕಾರ್ಮಿಕರಾಗಿದ್ದು ನಿನ್ನೆ ಮಹಿಳೆಗೆ ಕೊರೋನಾ ಸೋಂಕು ದೃಢವಾಗಿತ್ತು. ಹೀಗಾಗಿ ಆಸ್ಪತ್ರೆಗೆ ಅಡ್ಮಿಟ್ ಮಾಡಲು ಪೌರಕಾರ್ಮಿಕ ಒಕ್ಕೂಟದ ಮುಖಂಡರು ವಿಕ್ರಂ ಆಸ್ಪತ್ರೆ ಮತ್ತು ರಾಮಯ್ಯ ಆಸ್ಪತ್ರೆ ಸಂಪರ್ಕಿಸಿದ್ದರು.women-death-corona-bangalore

ಆದರೆ ಇಲ್ಲಿ ಬೆಡ್ ಇಲ್ಲ ಎಂದು ತಿಳಿಸಿದ್ದು ಹೀಗಾಗಿ ಸೋಂಕಿತ ಮಹಿಳೆಯನ್ನ ಅಂಬೇಡ್ಕರ್ ಕಾಲೇಜಿಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಇಂದು ಬೆಳಿಗ್ಗೆ ಮಹಿಳೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Key words:  women-death- corona -Bangalore.