Wednesday, September 30, 2026

BDA Apartments

ಇಂದಿನಿಂದ ಮಹಾರಾಣಿ ಕಾಲೇಜಿನ ಬಿ.ಎ ಪ್ರಥಮ ವರ್ಷದ ಪ್ರವೇಶಾತಿಗೆ ಅರ್ಜಿ ವಿತರಣ...
Home Front Page ಇಂದಿನಿಂದ ಮಹಾರಾಣಿ ಕಾಲೇಜಿನ ಬಿ.ಎ ಪ್ರಥಮ ವರ್ಷದ ಪ್ರವೇಶಾತಿಗೆ ಅರ್ಜಿ ವಿತರಣೆ…

ಇಂದಿನಿಂದ ಮಹಾರಾಣಿ ಕಾಲೇಜಿನ ಬಿ.ಎ ಪ್ರಥಮ ವರ್ಷದ ಪ್ರವೇಶಾತಿಗೆ ಅರ್ಜಿ ವಿತರಣೆ…

ಮೈಸೂರು,ಜು,16,2020(www.justkannada.in): ಇಂದಿನಿಂದ ಮಹಾರಾಣಿ ಕಾಲೇಜಿನ 2020 – 21 ನೇ ಸಾಲಿನ ಬಿ.ಎ ಪ್ರಥಮ ವರ್ಷದ ಪ್ರವೇಶಾತಿಗೆ  ಉಚಿತ ಅರ್ಜಿ ವಿತರಣೆ ಪ್ರಾರಂಭವಾಗಲಿದೆ.jk-logo-justkannada-logo

ಮಹಾರಾಣಿ ಕಾಲೇಜಿನಲ್ಲಿ ಜುಲೈ 20 ರಿಂದ ನೇರ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದ್ದು, ಈ ಕುರಿತು ಮಾಹಿತಿ ನೀಡಿರುವ ಕಾಲೇಜಿನ  ಪ್ರಾಂಶುಪಾಲ ಡಾ.ಬಿ.ಟಿ.ವಿಜಯ್, ಇಂದಿನಿಂದ  ಬಿ.ಎ ಪ್ರಥಮ ವರ್ಷದ ಪ್ರವೇಶಾತಿಗೆ ಅರ್ಜಿ ವಿತರಣೆ ಮಾಡಲಾಗುತ್ತದೆ. ಈ ಶೈಕ್ಷಣಿಕ ವರ್ಷದಿಂದ ಬಿ.ಎಸ್.ಡಬ್ಲ್ಯೂ ಹೊಸ ಕೋರ್ಸ್ ಆರಂಭವಾಗಲಿದ್ದು, ಜೊತೆಗೆ ಅಪರಾಧಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ಪತ್ರಿಕೋದ್ಯಮ, ಮನೋವಿಜ್ಞಾನ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ತತ್ವಶಾಸ್ತ್ರ, ಸಂಗೀತ, ಭೂಗೋಳಶಾಸ್ತ್ರ, ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು ಮತ್ತು ಸಂಸ್ಕೃತ ವಿಷಯಗಳನ್ನೊಳಗೊಂಡ ಐಚ್ಛಿಕ ಸಮೂಹಗಳಿಗೆ ಅರ್ಜಿ ವಿತರಣೆ ಮಾಡಲಾಗುತ್ತದೆ. Application - admission - BA First year -Maharani College – today-mysore

ಹೆಚ್ಚಿನ ವಿವರಗಳಿಗೆ ಕಾಲೇಜಿನ ವೆಬ್ಸೈಟ್ www.macw.in ಹಾಗೂ ದೂ.ಸಂ 0821 – 2425635 ಅನ್ನು ಸಂಪರ್ಕಿಸುವಂತೆ ಕಾಲೇಜಿನ  ಪ್ರಾಂಶುಪಾಲ ಡಾ.ಬಿ.ಟಿ.ವಿಜಯ್ ಮಾಹಿತಿ ನೀಡಿದ್ದಾರೆ.

Key words: Application – admission – BA First year -Maharani College – today-mysore