Friday, August 14, 2026

BDA Apartments

Home Front Page ಇದೆಂಥ ವಿಚಿತ್ರ ವಿವಾಹ: ಸಾಕುನಾಯಿಯನ್ನೇ ಮದುವೆಯಾದ ಮಹಿಳೆ

ಇದೆಂಥ ವಿಚಿತ್ರ ವಿವಾಹ: ಸಾಕುನಾಯಿಯನ್ನೇ ಮದುವೆಯಾದ ಮಹಿಳೆ

ಲಂಡನ್:ಆ-2:(www.justkannada.in) ಇದೊಂದು ರೀತಿಯ ಕಂಡು ಕೇಳರಿಯದ ವಿಚಿತ್ರ ವಿವಾಹ… ಅಚ್ಚರಿಯಾದರೂ ನಿಜವಾದ ಸಂಗತಿ… ಇಂಗ್ಲೆಂಡ್​​ನಲ್ಲಿ ಮಹಿಳೆಯೊಬ್ಬಳು ಸಾಕುನಾಯಿಯನ್ನು ಮದುವೆಯಾದ ವಿಲಕ್ಷಣ ಘಟನೆಯೊಂದು ನಡೆದಿದೆ.

ಟಿವಿಯಲ್ಲಿ ನೇರ ಪ್ರಸಾರವಾಗುತ್ತಿದ್ದ ’ದಿಸ್​ ಮಾರ್ನಿಂಗ್​’ ಎಂಬ ಕಾರ್ಯಕ್ರಮದಲ್ಲಿ ಎಲಿಜಬೆತ್​ ಹೋಡ್​ ಎಂಬಾಕೆ ತನ್ನ ಸಾಕುನಾಯಿಯನ್ನ ವರಿಸಿದ್ದಾಳೆ.

221 ಡೇಟಿಂಗ್ ಫೇಲ್ ಆದ ಬಳಿಕ, 4 ಎಂಗೇಜ್ ಮೆಂಟ್ ಮುರಿದು ಬಿದ್ದ ಬಳಿಕ ಪುರುಷರೊಂದಿಗಿನ ಸಂಬಂಧಗಳಿಂದ ಬೇಸತ್ತಿದ್ದ ಹೋಡ್, ಈ ಎಲ್ಲಾ ಸಂದರ್ಭಗಳಲ್ಲೂ ತನ್ನ ಜತೆಯೇ ಇದ್ದ ಆಕೆಯ ಪ್ರೀತಿಯ ನಾಯಿ ಲೋಗನ್ ನ್ನು ಮದುವೆಯಾಗಿದ್ದಾಳೆ.

ಈ ಕುರಿತು 49 ವರ್ಷದ ಎಲಿಜಬೆತ್ ಹೋಡ್, ಎಲ್ಲಾ ಎಂಗೇಜ್ ಮೆಮ್ಟ್ ಗಳು ಬ್ರೇಕಪ್ ಆಗಿ, ಪುರುಷರೊಂದಿಗಿನ ಸಂಬಂಧವೇ ಬೇಡ ಎನಿಸಿಬಿಟ್ಟಿತ್ತು. ಪುರುಷರನ್ನೇ ಏಕೆ ಮದುವೆಯಾಗಬೇಕು ಎಂದು ನಿರ್ಧರಿಸಿ ನನ್ನ ಸಾಕುನಾಯ್ಯನ್ನೇ ವಿವಾಹವಾಗಲು ನಿರ್ಧರಿಸಿ, ಮದುವೆಯಾಗಿದ್ದೇನೆ. ಈಗ ನನಗೆ ನಿಜವಾದ ಪ್ರೀತಿ ನನ್ನ ನಾಯಿ ಲೋಗನ್​ನಿಂದ ಸಿಕ್ಕಿದೆ ಎಂದು ತಿಳಿಸಿದ್ದಾಳೆ.

ಎಲಿಜಬೆತ್​ ಹೋಡ್ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ವಿಚಿತ್ರ ವಿವಾಹದ ವಿಡಿಯೋ ಭಾರೀ ವೈರಲ್ ಆಗುತ್ತಿದೆ.

Image result for Woman married her dog after 221 failed dates

ಇದೆಂಥ ವಿಚಿತ್ರ ವಿವಾಹ: ಸಾಕುನಾಯಿಯನ್ನೇ ಮದುವೆಯಾದ ಮಹಿಳೆ
Woman married her dog after 221 failed dates