ತೆರೆ ಮೇಲೆ ಬರಲು ‘ಅಮೆರಿಕಾದ ಅಧ್ಯಕ್ಷ’ ರೆಡಿ !

ಬೆಂಗಳೂರು, ಆಗಸ್ಟ್ 02, 2019 (www.justkannada.in): ರಾಗಿಣಿ ದ್ವಿವೇದಿ ಮತ್ತು ಶರಣ್‌ ನಟನೆಯ ‘ಅಧ್ಯಕ್ಷ ಇನ್‌ ಅಮೆರಿಕಾ’ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.

ಇತ್ತೀಚಿಗೆ ಚಿತ್ರದ ಟ್ರೇಲರ್‌ ಕೂಡ ಬಿಡುಗಡೆಯಾಗಿದ್ದು, ಸಾಕಷ್ಟು ಗಮನ ಸೆಳೆಯುತ್ತಿದೆ. ಚಿತ್ರದಲ್ಲಿ ಭರಪೂರ ಹಾಸ್ಯ, ಮನರಂಜನೆ ಇರುವುದು ಟೀಸರ್ ಸಾರಿ ಹೇಳುತ್ತಿದೆ.

ಶರಣ್‌, ಗೋವಿಂದೇಗೌಡ, ರಂಗಾಯಣ ರಘು, ಸಾಧು ಕೋಕಿಲ, ತಬಲಾ ನಾಣಿಯವರ ಕಾಮಿಡಿ ಪ್ರೇಕ್ಷಕರಿಗೆ ಸಖತ್‌ ಕಿಕ್‌ ನೀಡಲಿದೆ. ಅಲ್ಲದೆ, ಇದೇ ಮೊದಲ ಬಾರಿಗೆ ಹಾಸ್ಯ ಪ್ರಧಾನ ಪಾತ್ರದಲ್ಲಿ ರಾಗಿಣಿ ಕಾಣಿಸಿಕೊಂಡಿದ್ದಾರೆ.