Tuesday, November 17, 2026

Dasara Wishes

Renaissance keen DasraWishes_JK DasraWishes JK
Happy Dasara
Home Front Page ತುಮಕೂರಿನಲ್ಲಿ 5 ಸಾವಿರ ಕೋಟಿ ರೂ. ಹೂಡಿಕೆಗೆ ರೆನೈಸಾನ್ಸ್ ಆಸಕ್ತಿ: ಸಚಿವ ಎಂ.ಬಿ ಪಾಟೀಲ್

ತುಮಕೂರಿನಲ್ಲಿ 5 ಸಾವಿರ ಕೋಟಿ ರೂ. ಹೂಡಿಕೆಗೆ ರೆನೈಸಾನ್ಸ್ ಆಸಕ್ತಿ: ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ಅಕ್ಟೋಬರ್‌,1,2026 (www.justkannada.in)  2025ರಲ್ಲಿ ನಡೆದಿದ್ದ ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಘೋಷಿಸಿದ್ದಂತೆ ಭಾರತ-ಅಮೆರಿಕ ಪಾಲುದಾರಿಕೆಯುಳ್ಳ ರೆನೈಸಾನ್ಸ್ ಸೋಲಾರ್ ಅಂಡ್ ಎಲೆಕ್ಟ್ರಾನಿಕ್ ಮೆಟೀರಿಯಲ್ಸ್ ಕಂಪನಿಯು ತುಮಕೂರಿನ ಚೆನ್ನೈ- ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್ (ಸಿಬಿಐಸಿ) ಪ್ರದೇಶದಲ್ಲಿ 5,000 ಕೋಟಿ ರೂಪಾಯಿ ಬಂಡವಾಳ ಹೂಡಲು ಆಸಕ್ತಿ ತೋರಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.

ಖನಿಜ ಭವನದಲ್ಲಿ ಗುರುವಾರ ತಮ್ಮನ್ನು ಭೇಟಿಯಾದ ರೆನೈಸಾನ್ಸ್ ಕಂಪನಿಯ ಅಧ್ಯಕ್ಷ ಮತ್ತು ಸಿಇಒ ಡಾ.ಮಿಲಿಂದ್ ಎಸ್ ಕುಲಕರ್ಣಿ ಜತೆ ಸಚಿವ ಎಂ.ಬಿ ಪಾಟೀಲ್ ಅವರು ಸುದೀರ್ಘ ಮಾತುಕತೆ ನಡೆಸಿದರು.

ಈ ಬಗ್ಗೆ ಮಾತನಾಡಿರುವ ಅವರು, ಕಂಪನಿಯು ಸೋಲಾರ್ ಕ್ಷೇತ್ರದಲ್ಲಿ ಸಿಂಗಲ್‌ ಕ್ರಿಸ್ಟಲ್ ಸಿಲಿಕಾನ್ ಮತ್ತು ವೇಫರ್ ತಯಾರಿಕೆಯಲ್ಲಿ ಹೆಸರು ಮಾಡಿದೆ. ಅದು ಸಿಬಿಐಸಿ ಪ್ರದೇಶದಲ್ಲಿ 5 ಗಿಗಾವ್ಯಾಟ್ ಸಾಮರ್ಥ್ಯದ ಸೋಲಾರ್ ಇನ್-ಗಾಟ್ ಮತ್ತು ವೇಫರ್ ತಯಾರಿಕೆ ಘಟಕ ಸ್ಥಾಪಿಸಲು 100 ಎಕರೆ ಜಾಗ ಕೇಳಿದೆ. ಕಂಪನಿಯ ಉಳಿದ ಬೇಡಿಕೆಗಳನ್ನು ಕುರಿತು ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದಿದ್ದಾರೆ.Renaissance keen mb patil mb patil 1

ರೆನೈಸಾನ್ಸ್ ಕಂಪನಿಯು ತಂತ್ರಜ್ಞರೇ ಸೇರಿಕೊಂಡು ಆರಂಭಿಸಿರುವ ಉದ್ಯಮವಾಗಿದ್ದು, ಚೆನ್ನೈನಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ. ಉದ್ದೇಶಿತ ಸ್ಥಾವರಕ್ಕೆ ಅದು 80 ಮೆಗಾವ್ಯಾಟ್ ವಿದ್ಯುತ್ ಮತ್ತು 1 ಕೋಟಿ ಎಂಎಲ್ ಡಿ ನೀರು ಬೇಕಾಗುತ್ತದೆ ಎಂಬ ಎರಡು ಪ್ರಮುಖ ಅಗತ್ಯಗಳನ್ನು ನಮ್ಮ‌ ಗಮನಕ್ಕೆ ತರಲಾಗಿದೆ. ಇವುಗಳನ್ನು ಸಕಾರಾತ್ಮಕವಾಗಿ ಪರಿಗಣಿಸಲಾಗುವುದು. ಎಲ್ಲವೂ ನಿರೀಕ್ಷೆಯಂತೆ ನಡೆದರೆ 2028ರ ಮಧ್ಯ ಭಾಗದ ವೇಳೆಗೆ ಕಂಪನಿಯು ತನ್ನ ತಯಾರಿಕಾ ಚಟುವಟಿಕೆ ಆರಂಭಿಸಲಿದೆ ಎಂದು ಸಚಿವ ಎಂ.ಬಿ ಪಾಟೀಲ್ ಅವರು ತಿಳಿಸಿದ್ದಾರೆ.invest ₹5 mb patl

ಕಂಪನಿಯು ರಾಜ್ಯ ಸರಕಾರದ ಕಡೆಯಿಂದ ವಿಶೇಷ ಪ್ರೋತ್ಸಾಹನಾ ಭತ್ಯೆಗೂ ಮನವಿ ಮಾಡಿಕೊಂಡಿದೆ. ಈ ಕುರಿತು ಉನ್ನತ ಮಟ್ಟದಲ್ಲಿ ಚರ್ಚೆ ಪ್ರಗತಿಯಲ್ಲಿದೆ ಎಂದು‌ ಸಚಿವ ಎಂ.ಬಿ ಪಾಟೀಲ್ ನುಡಿದಿದ್ದಾರೆ.000 crore jk02

ಈ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಖುಷ್ಬೂ ಗೋಯಲ್ ಮತ್ತು ಕೆಐಎಡಿಬಿ ಸಿಇಒ ಗೋವಿಂದ ರೆಡ್ಡಿ, ಕೈಗಾರಿಕಾ ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಉಪಸ್ಥಿತರಿದ್ದರು.‌

 

English Summary
Title

Renaissance keen to invest ₹5,000 crore in Tumakuru: M. B. Patil

Short Description
Bengaluru: As announced at Invest Karnataka 2025, Renaissance Solar and Electronic Materials (RSOLEC), an India-US solar and semiconductor materials company, has expressed interest in investing ₹5,000 crore in the Chennai-Bengaluru Industrial Corridor (CBIC) region in Tumakuru, Minister for Large and Medium Industries M. B. Patil said on Thursday. He held a detailed discussion with RSOLEC Chairman and Chief Executive Officer Dr. Milind S. Kulkarni, who met him at Khanija Bhavan here. Speaking on the occasion, Patil said the company has established a strong presence in the solar sector, particularly in single-crystal silicon growth and wafer manufacturing. It has sought 100 acres of land in the CBIC region to establish a 5 GW solar ingot and wafer manufacturing facility. A final decision will be taken after discussions on the company's other requirements, he said.
Keywords
Renaissance keen, invest ₹5, 000 crore, Tumakuru, M. B. Patil