Friday, August 21, 2026

BDA Apartments

Home Front Page ವಿಂಬಲ್ಡನ್: ವೀನಸ್ ವಿಲಿಯಮ್ಸ್’ಗೆ ಆಘಾತ ನೀಡಿದ 15ರ ಹರೆಯದ ಬಾಲಕಿ !

ವಿಂಬಲ್ಡನ್: ವೀನಸ್ ವಿಲಿಯಮ್ಸ್’ಗೆ ಆಘಾತ ನೀಡಿದ 15ರ ಹರೆಯದ ಬಾಲಕಿ !

ಲಂಡನ್, ಜುಲೈ 02, 2019 (www.justkannada.in): ವಿಂಬಲ್ಡನ್ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಮಾಜಿ ಚಾಂಪಿಯನ್ ವೀನಸ್ ವಿಲಿಯಮ್ಸ್ ಆಘಾತ ಅನುಭವಿಸಿದ್ದಾರೆ.

15ರ ಹರೆಯದ ಶಾಲಾ ಬಾಲಕಿ ಕೋರಿ ಗೌಫ್ ವಿರುದ್ಧ ವೀನಸ್ ಸೋಲನುಭವಿಸಿದ್ದಾರೆ. ಬಲಾಡ್ಯೆಯನ್ನು ಮಣಿಸುವ ಮೂಲಕ ಗೌಫ್ ವಿಂಬಲ್ಡನ್ ಇತಿಹಾಸ ನಿರ್ಮಿಸಿದ್ದಾರೆ.

ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಅಮೆರಿಕಾ ಆಟಗಾರ್ತಿ ವೀನಸ್ ವಿರುದ್ಧ ಅಮೆರಿಕಾದವರೇ ಆದ ಗೌಫ್, 6-4, 6-4ರ ನೇರ ಸೆಟ್ ಗೆಲುವು ದಾಖಲಿಸಿದರು. ಈ ಸೋಲಿನೊಂದಿಗೆ ವಿಲಿಯಮ್ಸ್ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.

36ರ ಹರೆಯದ ವೀನಸ್ ವಿಲಿಯಮ್ಸ್ ಸುಮಾರು ಎರಡು ದಶಕಗಳಿಂದಲೂ ಆಲ್ ಇಂಗ್ಲೆಂಡ್ ಕ್ಲಬ್ ನಡೆಸುವ ಪ್ರತಿಷ್ಠಿತ ವಿಂಬಲ್ಡನ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಸಿಂಗಲ್ಸ್ ವಿಭಾಗದಲ್ಲಿ ಒಟ್ಟು ಐದು ಬಾರಿ ಚಾಂಪಿಯನ್ಸ್ ಅನ್ನಿಸಿಕೊಂಡಿದ್ದಾರೆ ಕೂಡ. ಈ ಐದು ಪ್ರಶಸ್ತಿಗಳಲ್ಲಿ ಎರಡು ಪ್ರಶಸ್ತಿಗಳನ್ನು ವೀನಸ್ ಗೆಲ್ಲುವಾಗ ಕೋರಿ ಗೌಫ್ ಇನ್ನೂ ಜನಿಸಿರಲೇ ಇಲ್ಲ!