Friday, August 14, 2026

BDA Apartments

Home Cinema ಓಪೆನ್ ಚಾಲೆಂಜ್ ! ಸಂಚಲನ ಮೂಡಿಸಿದ ದರ್ಶನ್ ಟ್ವೀಟ್

ಓಪೆನ್ ಚಾಲೆಂಜ್ ! ಸಂಚಲನ ಮೂಡಿಸಿದ ದರ್ಶನ್ ಟ್ವೀಟ್

ಬೆಂಗಳೂರು, ಜುಲೈ 02, 2019 (www.justkannada.in): ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೋರ್ವ ಸೆಲಬ್ರಿಟಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ.

ದರ್ಶನ್ ಮಾಡಿರುವ ಈ ಟ್ವೀಟ್ ಸ್ಯಾಂಡಲ್ ವುಡ್ ನಲ್ಲಿ ಭಾರೀ ಸಂಚಲನ ಮೂಡಿಸಿದೆ. ಯಾವ ಸೆಲೆಬ್ರಿಟಿಗೆ ಯಾರು ಚಾಲೆಂಜ್ ಹಾಕುತ್ತಾರೆ? ದರ್ಶನ್ ಅವರೇ ಬೇರೆ ನಟರಿಗೆ ಚಾಲೆಂಜ್ ಮಾಡಲಿದ್ದಾರಾ? ಅಥವಾ ಬೇರೆಯವರ ಚಾಲೆಂಜ್ ನ್ನು ಸ್ವಾಗತಿಸಲಿದ್ದಾರಾ? ಎನ್ನುವ ಹತ್ತಾರು ಪ್ರಶ್ನೆಗಳು ಹುಟ್ಟಿಕೊಂಡಿವೆ.

ಟ್ವೀಟರ್ ನಲ್ಲಿ ದರ್ಶನ್, ‘ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್ ಮಧ್ಯಾಹ್ನ ಫೇಸ್ ಬುಕ್ ಲೈವ್ ಬರ್ತಿನಿ ಬಂದಾಗ ಎಲ್ಲಾನು ತಿಳಿಸುತ್ತೇನೆ” ನಿಮ್ಮ ದಾಸ ದರ್ಶನ್ ಎಂದು ಬರೆದು ಡಿ ಬಾಸ್ ತಮ್ಮ ಅಧಿಕೃತ ಟ್ವೀಟರ್ ಖಾತೆಯಿಂದ ಟ್ವೀಟ್ ಮಾಡಿದ್ದಾರೆ.