Saturday, August 15, 2026

BDA Apartments

Home Front Page ದಸರಾ ಗಜಪಡೆಗೆ ತೂಕ ಪರೀಕ್ಷೆ: ಕ್ಯಾಪ್ಟನ್ ಅಭಿಮನ್ಯುನೇ ಬಲಶಾಲಿ.

ದಸರಾ ಗಜಪಡೆಗೆ ತೂಕ ಪರೀಕ್ಷೆ: ಕ್ಯಾಪ್ಟನ್ ಅಭಿಮನ್ಯುನೇ ಬಲಶಾಲಿ.

ಮೈಸೂರು,ಸೆಪ್ಟಂಬರ್,6,2023(www.justkannada.in):  ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿ ಅರಮನೆಯಲ್ಲಿ ಬೀಡುಬಿಟ್ಟಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ಇಂದು ತೂಕ ಪರೀಕ್ಷೆ ನಡೆಸಲಾಯಿತು.

ದೇವರಾಜ ಮೊಹಲ್ಲಾದ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ಮೊದಲ ಹಂತದಲ್ಲಿ 8ಆನೆಗಳಿಗೆ ತೂಕ ಪರೀಕ್ಷೆ ಮಾಡಲಾಯಿತು. ಪೊಲೀಸರ ಬಿಗಿ ಭದ್ರತೆಯಲ್ಲಿ ಗಜಪಡೆ ಕರೆತರಲಾಗಿತ್ತು. ತೂಕದಲ್ಲಿ ಕ್ಯಾಪ್ಟನ್ ಅಭಿಮನ್ಯುನೇ ಬಲಶಾಲಿಯಾಗಿದ್ದಾನೆ.

ದಸರಾ ಗಜಪಡೆಯ ತೂಕದ ವಿವರ ಹೀಗಿದೆ…

ಅಭಿಮನ್ಯು – 5,160 ಕೆಜಿ.

ವಿಜಯ – 2,830 ಕೆಜಿ.

ಭೀಮ – 4,370 ಕೆಜಿ

ವರಲಕ್ಷ್ಮಿ – 3,020 ಕೆಜಿ

ಮಹೇಂದ್ರ – 4,530 ಕೆಜಿ

ಧನಂಜಯ – 4,940 ಕೆಜಿ

ಕಂಜನ್ – 4,240 ಕೆಜಿ

ಗೋಪಿ – 5,080 ಕೆಜಿ

Key words: Weight Test – dasara gajapade- Captain –Abhimanyu – strong.